ಲಾಕ್ಡೌನ್: ಸ್ವಂತ ಊರುಗಳತ್ತ ಜನ, ಟೋಲ್’ಗಳಲ್ಲಿ ಜನ ದಟ್ಟಣೆ

Promotion

ಬೆಂಗಳೂರು, ಮೇ 09, 2021 (www.justkannada.in): ಕಠಿಣ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಜನ ತವರಿನತ್ತ ಮುಖಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ನೆಲಮಂಗಲದ ನವಯುಗ ಟೋಲ್, ಸೇರಿದಂತೆ ಹೆದ್ದಾರಿಗಳಲ್ಲಿ ವಾಹನಗಳ ದಟ್ಟಣೆ ಕಂಡುಬಂದಿದೆ.

ಕಠಿಣ ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ಲಗೇಜ್ ಸಮೇತ ಜನ ಊರಿಗೆ ಹೊರಟಿದ್ದಾರೆ. ತುಮಕೂರು-ಶಿರಾ, ಚಿಕ್ಕಮಗಳೂರು, ಶಿವಮೊಗ್ಗ ಬಳ್ಳಾರಿ ಸೇರಿದಂತೆ ವಿವಿಧೆಡೆ ನೂರಾರು ವಾಹನಗಳು ತೆರಳುತ್ತಿವೆ.

ಲಾಕ್ ಡೌನ್ ಮೇ 12 ಕ್ಕೆ ಮುಕ್ತಾಯವಾಗಬಹುದು ಎಂದು ಬಹುತೇಕರು ಉಳಿದುಕೊಂಡಿದ್ದರು. ಮತ್ತೆ ಕಠಿಣ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಜನ ಸ್ವಂತ ಊರುಗಳತ್ತ ತೆರಳಿದ್ದಾರೆ.

ಬೆಂಗಳೂರಿನಲ್ಲಿ ಬೆಡ್ ಸಿಗದೇ ಸೋಂಕಿತರು ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ಸೋಂಕು ಹೆಚ್ಚಾದರೆ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.