ಲಾಕ್ ಡೌನ್ ಎಫೆಕ್ಟ್: ಕಲಾವಿದ, ಕಿರುನಾಟಕ ನಿರ್ದೇಶಕ ಆತ್ಮಹತ್ಯೆಗೆ ಶರಣು.

Promotion

ಮೈಸೂರು,ಜುಲೈ,6,2021(www.justkannada.in): ಲಾಕ್ ಡೌನ್ ಹಿನ್ನಲೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಿರುನಾಟಕ ನಿರ್ದೇಶಕ, ಕಲಾವಿದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk

.ಮೈಸೂರಿನ ವಿಜಯನಗರದಲ್ಲಿ ಈ ಘಟನೆ ನಡೆದಿದೆ. ನವೀನ್ ಕುಮಾರ್(32) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕಲಾವಿದ. ನವೀನ್ ಕುಮಾರ್ ನಾಟಕಗಳನ್ನ ಡೈರೆಕ್ಟ್ ಮಾಡಿ ಪ್ರದರ್ಶನ ನೀಡುತ್ತಿದ್ದರು. ತನ್ನದೇ ತಂಡ ರಚಿಸಿಕೊಂಡು, ಮೈಸೂರು ಹಾಗೂ ಬೆಂಗಳೂರಿನ ಕಲಾಮಂದಿರದಲ್ಲಿ ನವೀನ್ ಪ್ರದರ್ಶನ ನೀಡಿದ್ದರು.

ನವೀನ್‌ಗೆ ಲಾಕ್ ಡೌನ್ ವೇಳೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನಲೆ ಮನನೊಂದ ನವೀನ್ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Lockdown-Effect-Artist-Drama Director- suicide-mysore