ಬಿಜೆಪಿ ಸೇರಿದ 36 ರೌಡಿಗಳ ಪಟ್ಟಿ ಬಿಡುಗಡೆ- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್.

Promotion

ಬೆಂಗಳೂರು,ಡಿಸೆಂಬರ್,6,2022(www.justkannada.in): ಬಿಜೆಪಿಯವರು ರೌಡಿ ಮೋರ್ಚ ಮಾಡಿಕೊಂಡಿದ್ದಾರೆ. ಈವರೆಗೆ 36 ರೌಡಿಗಳು ಸೇರಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.

ಈ ಕುರಿತು ಇಂದು ಮಾತನಾಡಿದ ಎಂ.ಲಕ್ಷ್ಮಣ್, ಬೆಂಗಳೂರು 60 ರೌಡಿಶೀಟರ್ ಗಳು ಬಿಜೆಪಿಗೆ ಸೇರುತ್ತಿದ್ದಾರೆ.  ಸದ್ಯ 36 ರೌಡಿಗಳು ಬಿಜೆಪಿ ಸೇರಿದ್ದಾರೆ. ಸದ್ಯದಲ್ಲೇ 24 ರೌಡಿಶೀಟರ್ ಗಳು ಬಿಜೆಪಿ ಸೇರಲಿದ್ದಾರೆ. ಇಂದು ಮೊದಲ ಕಂತಿನ ಪಟ್ಟಿ ರಿಲೀಸ್ ಮಾಡುತ್ತಿದ್ದೇವೆ ಎಂದರು.

ಸೈಲೆಂಟ್ ಸುನೀಲ್ ಮತ್ತು 9 ಸಹಚರರು,  ವಿಲ್ಸನ್ ಗಾರ್ಡನ್ ನಾಗ,  ಫೈಟರ್ ರವಿ ಮತ್ತು 5 ಮಂದಿ ಸಹಚರರು,  ಬೆತ್ತನಗೆರೆ ಶಂಕರ್ , ಒಂಟೆ ರೋಹಿತ್ ಮತ್ತು ಸಹಚರರು, ಕುಣಿಗಲ್ ಗಿರಿ ,  ಮಂಜುನಾಥ್ ಸೇರಿ 36 ಮಂದಿ ಬಿಜೆಪಿ ಸೇರಿದ್ದಾರೆ ಎಂದು  ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.

Key words: List – 36 rowdies- join-BJP- KPCC spokesperson -M. Laxman