ಇನ್ನೊಂದು ವಾರದಲ್ಲಿ ಲಿಕ್ವಿಡ್ ಆಕ್ಸಿಜನ್ ಮತ್ತು 300 ಬೆಡ್ ಗಳ ವ್ಯವಸ್ಥೆ- ಸುತ್ತೂರು ಶ್ರೀಗಳ ಹೇಳಿಕೆ…

liquid-oxygen-300-beds-mysore-suttur-shri
Promotion

ಮೈಸೂರು,ಮೇ,10,2021(www.justkannada.in): ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗಾಗಿ ಹಲವು ಕ್ರಮಗಳನ್ನ ಕೈಗೊಳ್ಳಲಾಗುತ್ತಿದ್ದು, ಬೆಡ್ ಮತ್ತು ಆಕ್ಸಿಜನ್ ಕೊರತೆ ಕುರಿತು  ಇಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ‌ನ ನೇತೃತ್ವದಲ್ಲಿ ಸುತ್ತೂರು ಶಾಖಾ ಮಠದಲ್ಲಿ ಸಭೆ ನಡೆಯಿತು.jk

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿ ಹಲವರು ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಕೊರೋನಾ ನಿರ್ವಹಣೆಗೆ ಸಚಿವ ಎಸ್.ಟಿ ಸೋಮಶೇಖರ್ ಸುತ್ತೂರು ಮಠದ ಸಹಕಾರ ಕೋರಿದರು.

ಸಭೆ ಬಳಿಕ ಮಾತನಾಡಿದ ಸುತ್ತೂರು ಶ್ರೀಗಳು, ಮೈಸೂರಿನಲ್ಲಿರುವ JSS ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ಒದಗಿಸಲಾಗಿದೆ‌ ಆದರೆ ಇದೀಗಾ ಆಕ್ಸಿಜನ್ ವ್ಯವಸ್ಥೆ ಹೆಚ್ಚುಗೊಳಿಸಬೇಕಿದೆ. ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆ ಬೆಡ್ 300 ಬೆಡ್ ವ್ಯವಸ್ಥೆ ಆಗಲಿದೆ. ಇದು ಇನ್ನೊಂದು ವಾರದಲ್ಲಿ ಇದರ ಸಂಪೂರ್ಣ ವ್ಯವಸ್ಥೆ ಆಗಲಿದೆ. ಆಕ್ಸಿಜನ್ ವ್ಯವಸ್ಥೆಯ ನೇತೃತ್ವ ಸದ್ಯ ಸಂಸದ ಪ್ರತಾಪ್ ಸಿಂಹ ಅವರು ವಹಿಸಿದ್ದಾರೆ ಎಂದು ತಿಳಿಸಿದರು.liquid-oxygen-300-beds-mysore-suttur-shri

ಜನರು ಕೊರೊನಾದಿಂದ ಎಚ್ಚೆತ್ತುಕೊಳ್ಳಬೇಕಿದೆ. ಯಾರು ಕೂಡ ಇದನ್ನ ನೆಗ್ಲೆಟ್ ಮಾಡಬಾರದು. ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಜನರು ಕ್ರಮ ವಹಿಸಬೇಕು.ಅನಗತ್ಯವಾಗಿ ದಿನಸಿ ಖರೀದಿಗೆ ಹೊರಗೆ ಬರಬಾರದು. ಶ್ರೀಮಠ ಈ ಬೆಡ್ ವ್ಯವಸ್ಥೆಯ  ಸಂಪೂರ್ಣ ಜವಬ್ದಾರಿ ಹೊತ್ತಿದೆ ಎಂದು ಸುತ್ತೂರು ಶ್ರೀಗಳು ತಿಳಿಸಿದರು.

Key words: Liquid oxygen – 300 beds –mysore- suttur shri