ಖಾಸಗಿ ಲೇಔಟ್ ಗಳಿಂದ ಲಿಂಗಾಂಬುದಿ ಕೆರೆ ತೂಬು ಬಂದ್ ವಿಚಾರ: ಸ್ಪಷ್ಟನೆ ನೀಡಿದ ಮುಡಾ ಅಧ್ಯಕ್ಷ ಹೆಚ್‌.ವಿ‌.ರಾಜೀವ್.

Promotion

ಮೈಸೂರು,ಅಕ್ಟೋಬರ್,28,2021(www.justkannada.in): ಲಿಂಗಾಂಬುದಿಕರೆಗೆ ಬೇರೆ ಕೆರೆಗಳಿಂದ ನೀರು ಬರುತ್ತಿದೆ. ಕೆರೆ ಕೆಳಗಿನ ಬಡಾವಣೆಗಳಿಗೆ ನೀರು ಹರಿಯದಂತೆ ತೂಬುಗಳನ್ನ ಬಂದ್ ಮಾಡಲಾಗಿತ್ತು. ಆದರೆ ಇದೀಗ ಕೆರೆ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ತೂಬುಗಳನ್ನ ತೆರವಿಗೆ ಸೂಚನೆ ನೀಡಿದ್ದೇನೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದ್ದಾರೆ.

ಖಾಸಗಿ ಲೇಔಟ್ ಗಳಿಂದ ಲಿಂಗಾಂಬುದಿ ಕರೆ ತೂಬು ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಡಾ ಅಧ್ಯಕ್ಷ ಹೆಚ್‌.ವಿ‌.ರಾಜೀವ್, ಮಳೆಯಿಂದಾಗಿ ಮೈಸೂರಿನ ಸುತ್ತಮುತ್ತಲಿನ ಕೆರೆಗಳು ತುಂಬಿವೆ. ಲಿಂಗಾಂಬುದಿಕರೆಗೆ ಬೇರೆ ಕೆರೆಗಳಿಂದ ನೀರು ಬರುತ್ತಿದೆ. ಕೆರೆ ಕೆಳಗಿನ ಬಡವಾಣೆಗಳಿಗೆ ನೀರು ಹರಿಯದಂತೆ ತೂಬುಗಳನ್ನ ಬಂದ್ ಮಾಡಲಾಗಿತ್ತು. ಆದರೆ ಇದೀಗ ತೂಬುಗಳನ್ನ ತೆರವಿಗೆ ಸೂಚನೆ ನೀಡಿದ್ದೇನೆ. ನೀರಾವರಿ ಇಲಾಖೆ ಅಧಿಕಾರಿಗಳು, ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.

ನೀರು ಸರಾಗವಾಗಿ ಹೊರಗೆ ಹೋಗುವಂತೆ ವ್ಯವಸ್ಥೆ ಕಲ್ಪಿಸುತ್ತೇವೆ. ಬಡಾವಣೆಗಳಿಗೂ ತೊಂದರೆಯಾಗದಂತೆ ಕ್ರಮವಹಿಸಲಾಗುವುದು. ಹೆಚ್ಚುವರಿ ನೀರು ಹರಿಯುವ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಲಾಗುವುದು.ಮಳೆ ಹಿನ್ನೆಲೆ ಹಳ್ಳಗಳ ಕ್ಲೀನಿಂಗ್ ಕಾರ್ಯ ಕೂಡಾ ನಡೆಯುತ್ತಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ‌.ರಾಜೀವ್ ಹೇಳಿದರು.

Key words: Lingambudi Lake -private layouts- MUDA President- HV Rajeev