ಹಳೆಗನ್ನಡ ಕವಿಗಳಾ ಸಾಲಿಗೆ ಕುಮಾರಸ್ವಾಮಿ ಹೆಸರು ಸೇರಿಸಿದ ಸಚಿವ ವಿ.ಸೋಮಣ್ಣ : ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮಡಿಕೇರಿ,ನವೆಂಬರ್,01,2020ರಾಜ್ಯೋತ್ಸವದ ಸಂದೇಶ ಓದುವಾಗ ‘ಹಳೆಗನ್ನಡ ಕವಿಗಳಾದ ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ’ ಎನ್ನುವ ಬದಲು ‘ಕುಮಾರಸ್ವಾಮಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.jk-logo-justkannada-logo

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವದ ಸಂದೇಶ ಓದುವ ಸಂದರ್ಭ ಈ ರೀತಿಯಾಗಿ ಎಡವಟ್ಟು ಮಾಡಿಕೊಂಡಿದ್ದಾರೆ.

‘ಹಳೆಗನ್ನಡ ಕವಿಗಳಾದ ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ’ ಎನ್ನುವ ಬದಲು ‘ಕುಮಾರಸ್ವಾಮಿ’ ಎಂದಿದ್ದಾರೆ.

ಅದೇ ರೀತಿ ಕನ್ನಡ ಭಾಷೆಗೆ ಸುಮಾರು 2,000 ವರ್ಷಗಳ ಇತಿಹಾಸವಿದೆ ಎಂದು ಹೇಳುವ ಬದಲಿಗೆ 2 ವರ್ಷಗಳ ಇತಿಹಾಸವಿದೆ ಎಂದು ಓದಿರುವ ವಿಡಿಯೋ ತುಣಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರಿಂದ ಟೀಕೆಗಳು ವ್ಯಕ್ತವಾಗಿದೆ.

key words : line-old-poets-Minister V.Somanna-added-Kumaraswamy-social-media-video-viral