ಹರಿಯಾಣ ಹಾಗೂ ಉತ್ತರ ಪ್ರದೇಶದ ಕೆಲವೆಡೆ ಲಘು ಭೂಕಂಪನ

Promotion

ಬೆಂಗಳೂರು, ಫೆಬ್ರವರಿ 05, 2023 (www.justkannada.in): ಹರಿಯಾಣ ಹಾಗೂ ಪಶ್ಚಿಮ ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಲಘು ಭೂಕಂಪನ ಸಂಭವಿಸಿದೆ.

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.2ರಷ್ಟು ದಾಖಲಾಗಿದೆ.  ಪಶ್ಚಿಮ ಉತ್ತರಪ್ರದೇಶದ ಶಾಮ್ಲಿಯಲ್ಲಿ ಅದರ ಕೇಂದ್ರಬಿಂದುವಿತ್ತು.

ಭೂಮಿಯಿದ 5 ಕಿ.ಮೀ. ಆಳದಲ್ಲಿ ಭೂಕಂಪನ ಸಂಭವಿಸಿದ್ದಾಗಿ ರಾಷ್ಟ್ರೀಯ ಭೂಕಂಪಶಸ್ತ್ರ ಕೇಂದ್ರವು ತಿಳಿಸಿದೆ.

ಭೂಕಂಪನದಲ್ಲಿ ಯಾವುದೇ ಪ್ರಾಣ ಹಾನಿ, ಆಸ್ತಿಪಾಸ್ತಿ ನಷ್ಟದ ಪ್ರಕರಣವಾಗಲಿ ವರದಿಯಾಗಿಲ್ಲ.