Sunday, August 16, 2026

BDA Apartments

Home Cinema ಹಿರಿಯ ಚಿತ್ರ ನಿರ್ಮಾಪಕ ಆರ್.ವಿ.ಗುರುಪಾದ ನಿಧನ

ಹಿರಿಯ ಚಿತ್ರ ನಿರ್ಮಾಪಕ ಆರ್.ವಿ.ಗುರುಪಾದ ನಿಧನ

ಬೆಂಗಳೂರು, ಫೆಬ್ರವರಿ 05, 2023 (www.justkannada.in): ಹಿರಿಯ ಚಿತ್ರ ನಿರ್ಮಾಪಕ ಆರ್.ವಿ. ಗುರುಪಾದ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕನ್ನಡ ಸೇರಿದಂತೆ ತೆಲುಗು, ತಮಿಳು ಚಿತ್ರಗಳನ್ನ ನಿರ್ಮಿಸಿ ಖ್ಯಾತಿ ಗಳಿಸಿದ್ದ ಆರ್.ವಿ. ಗುರುಪಾದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಡಾ.ರಾಜ್ ಕುಮಾರ್ ಸೇರಿ ತೆಲುಗಿನ ಎನ್ ಟಿಆರ್, ಕೃಷ್ಣ, ಕೃಷ್ಣಂರಾಜು, ಚಿರಂಜೀವಿ ಮುಂತಾದ ಹಿರಿಯ ನಾಯಕ ನಟರ ಜೊತೆ ಕೆಲಸ ಮಾಡಿದ್ದಾರೆ.

ಕನ್ನಡ ಸೇರಿ ತೆಲುಗು, ತಮಿಳು, ಹಿಂದಿ ಮತ್ತು ಭಾಷೆಗಳಲ್ಲಿ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಬಾಲಿವುಡ್’ನಲ್ಲಿ ಶ್ರೀದೇವಿ ನಾಯಕಿಯಾಗಿ ನಟಿಸಿದ್ದ ‘ಅಕಲ್ ಮಂದ್’ ಚಿತ್ರಕ್ಕೂ ನಿರ್ಮಾಪಕರಾಗಿದ್ದರು.