ಮೂರು ಮದುವೆಯಾದ ಮಹಿಳೆಯಿಂದ ಗಂಡನಿಗೆ ಜೀವ ಬೆದರಿಕೆ.

Promotion

ಮೈಸೂರು,ಮಾರ್ಚ್,13,2022(www.justkannada.in): ಒಂದಲ್ಲ, ಎರಡಲ್ಲ, ಮೂರು ಮದುವೆಯಾದ  ಮಹಿಳೆ ತನ್ನ ಮೂರನೇ ಗಂಡನಿಗೆ ಜೀವ ಬೇದರಿಕೆ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಉದಯಗಿರಿಯ ನಿಧಾ ಖಾನ್  ಎಂಬುವವರು ತನ್ನ 3ನೇ ಗಂಡ ರಾಜೀವ್ ನಗರದ ಅಜಾಮ್ ಖಾನ್ ಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈಗಾಗಲೇ ಎರಡು ಮದುವೆಯಾಗಿರುವ ನಿಧಾ ಖಾನ್ ಗೆ, ಟೆಂಡರ್ ಅ್ಯಪ್ ಮೂಲಕ ಅಜಾಮ್ ಖಾನ್  ಪರಿಚಯವಾಗಿತ್ತು. ನವೆಂಬರ್ 2019 ರಲ್ಲಿ ಅಜಾಮ್ ಖಾನ್ ಜೊತೆ ನಿಧಾ ಖಾನ್ ಮೂರನೇ ಮದುವೆಯಾಗಿದ್ದು, ಅಜಾಮ್ ಖಾನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಆದರೆ ಪತ್ನಿ ನಿಧಾ ಖಾನ್ ಮೂರು ಮದುವೆಯಾದ್ರೂ ಬೇರೆ ಯುವಕರ ಜೊತೆ ಚಾಟಿಂಗ್, ಮೀಟಿಂಗ್ ಮಾಡುತ್ತಿದ್ದು ಮೂರನೇ ಪತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಪತ್ನಿ ರಂಗಿನಾಟ ಕಣ್ಣಾರೆ ಕಂಡ ಪತಿ ಅಜಾಮ್ ಖಾನ್ ಪತ್ನಿ ಹಾಗೂ ಪ್ರಿಯತಮನನ್ನ ಪೋಲೀಸರಿಗೆ ಒಪ್ಪಿಸಿದ್ದು ಇದೀಗ ಪತಿ ಅಜಾಮ್ ಖಾನ್ ಗೆ ನಿಧಾ ಖಾನ್ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Key words: Life- threatening -husband – three married -woman.