‘ಮೈ ಚೌಕಿದಾರ್’ ಅಲ್ಲ ‘ಮೈ ಪಾಗಲ್’ ಎಂದು ಬಿಜೆಪಿ ನಾಯಕರು ಘೋಷಿಸಿಕೊಳ್ಳಲಿ- ಪ್ರಧಾನಿ ಮೋದಿ ಹೇಳಿಕೆ ಕುರಿತು ಸಿದ್ದರಾಮಯ್ಯ ಕಿಡಿ….

Promotion

ಬೆಂಗಳೂರು,ಮೇ,6,2019(www.justkannada.in):  ರಾಹುಲ್‌ ತಂದೆ  ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಜೀವನವು ನಂ.1 ಭ್ರಷ್ಟಾಚಾರಿ ಎಂದೇ ಕೊನೆಗೊಂಡಿತು ಎಂದು   ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ.  ಬಿಜೆಪಿ ನಾಯಕರು ‘ಮೈ ಚೌಕಿದಾರ್’ ಅಲ್ಲ ‘ಮೈ ಪಾಗಲ್’ ಎಂದು ಘೋಷಿಸಿಕೊಳ್ಳುವುದು ಒಳ್ಳೆಯದು  ಎಂದು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.let-bjp-leaders-announce-mypagal-siddaramaiah-blames-narendra-modi

ಈ ಕುರಿತು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ವಿನಾಶಕಾಲೇ ವಿಪರೀತ ಬುದ್ದಿ ತಾಯಿಯಂತೆಯೇ ಉಗ್ರರಿಗೆ ಬಲಿಯಾದ ರಾಜೀವ್‌ ಜೀ ಅವರ ಬಗ್ಗೆ ನೀಚತನದ ಮಾತುಗಳನ್ನಾಡುತ್ತಿರುವ ನರೇಂದ್ರ ಮೋದಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಬೇಕಾದ ವಿಶ್ರಾಂತಿಯನ್ನು ಮತದಾರರೇ ನೀಡುತ್ತಾಋಎ. ಅವರು ಈ ಕಾಯಿಲೆಯಿಂದ ಶೀಘ್ರ ಗುಣಮುಖರಾಗಲಿ ಎಂದು ಟಾಂಗ್ ನೀಡಿದರು.

ಮತ್ತೊಂದು ಟ್ವಿಟ್ ಮಾಡಿರುವ ಸಿದ್ದರಾಮಯ್ಯ, ’ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ’ ಎನ್ನುವಂತೆ ಸೋಲಿನ ಭೀತಿಯಲ್ಲಿರುವ ನರೇಂದ್ರ ಮೋದಿಯವರಿಂದ ಹಿಡಿದು ಈಶ್ವರಪ್ಪನವರವರೆಗೆ ಎಲ್ಲರ ನಾಲಿಗೆಗಳಲ್ಲಿ ಈ ಹತಾಶೆ ಕಾಣಿಸುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ‘ಮೈ ಚೌಕಿದಾರ್’ ಅಲ್ಲ, ‘ಮೈ ಪಾಗಲ್’ ಎಂದು ಬಿಜೆಪಿ ನಾಯಕರೆಲ್ಲ‌ ಘೋಷಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

Key words: Let –BJP- leaders- announce –MyPagal-Siddaramaiah –blames- Narendra Modi