ಟಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿ: 15 ದಿನದೊಳಗೆ ಕಬ್ಬು ಕಟಾವಿಗೆ ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಸೂಚನೆ.

kannada t-shirts

ಮೈಸೂರು,ಜನವರಿ,23,2023(www.justkannada.in): ಟಿ. ನರಸೀಪುರ ತಾಲ್ಲೂಕಿನಲ್ಲಿ ನಿರಂತರ ಚಿರತೆ ದಾಳಿ ಹಿನ್ನೆಲೆ, ಮುಂದಿನ 15 ದಿನಗಳೂಳಗಾಗಿ ಪಕ್ಷಗೊಂಡಿರುವ ಕಬ್ಬುಗಳನ್ನು ಕಟಾವು ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಡಾ  ಕೆ.ವಿ ರಾಜೇಂದ್ರ ಸೂಚನೆ ನೀಡಿದ್ದಾರೆ.

ಕೃಷಿ ಇಲಾಖೆ, ಆಹಾರ ಮತ್ತು ಸರಬರಾಜು ಇಲಾಖೆ, ಬಣ್ಣಾರಿ ಅಮ್ಮನ್ ಕಾರ್ಖಾನೆ  ಹಾಗೂ ತಹಶೀಲ್ದಾರ್ ಗಳೊಂದಿಗೆ  ಮೈಸೂರು ಡಿಸಿ ಡಾ ಕೆ.ವಿ ರಾಜೇಂದ್ರ ಸಭೆ ಚರ್ಚಿಸಿದ್ದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ನಂಜನಗೂಡು ತಾಲ್ಲೂಕಿನ ಗಡಿ ಪ್ರದೇಶದಲ್ಲಿಯೂ ಕ್ರಮವಹಿಸಲು ಸೂಚನೆ ನೀಡಿದ್ದಾರೆ.

ಈಗಾಗಲೇ ತಾಲ್ಲೂಕಿನಲ್ಲಿ ಕಬ್ಬು ಕಟಾವು ಕಾರ್ಯದಲ್ಲಿ 19 ತಂಡಗಳು ತೊಡಗಿದ್ದು,  ಪ್ರತಿ ತಂಡದಿಂದ 15ಟನ್ ಕಬ್ಬು ಕಟಾವಿನ ಬಗ್ಗೆ ಅಧಿಕಾರಿಗಳು  ಮಾಹಿತಿ ನೀಡಿದರು. ಈ ವೇಳೆ  ಕಟಾವು  ಮಾಡುವ 19 ತಂಡವನ್ನು 30ಕ್ಕೇರಿಸಲು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಸೂಚನೆ ನೀಡಿದರು. ಕಬ್ಬಿನ ತೋಟದಲ್ಲಿ ಚಿರತೆಗಳು ವಾಸಿಸುವ ಹಿನ್ನೆಲೆ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ನಿನ್ನೆ ಬಾಲಕನೋರ್ವನನ್ನು ಚಿರತೆ ಬಲಿ ಪಡೆದಿದ್ದು ಹೀಗೆ ನಿರಂತರವಾಗಿ ಚಿರತೆ ದಾಳಿಯಾಗುತ್ತಿದೆ.

Key words: Leopard -attack -T. Narasipur – Mysore DC- KV Rajendra –sugarcane

website developers in mysore