ಸಂಸದೆ ಸುಮಲತಾರನ್ನ ವೇದಿಕೆಗೆ ಕರೆತಂದಿದ್ದಕ್ಕೆ ಅಸಮಾಧಾನ: ಜೆಡಿಎಸ್ ಕಾರ್ಯಕರ್ತರ ವಾಗ್ವಾದ, ಜಟಾಪಟಿ.

ಮಂಡ್ಯ,ಜನವರಿ,23,2023(www.justkannada.in):  ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರನ್ನ ವೇದಿಕೆ ಏರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಅಂಬರೀಶ್ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.

ಮಂಡ್ಯ ಜಿಲ್ಲೆಯ ಬಿ. ಗೌಡಗೆರೆ ಗ್ರಾಮದ ದೇವಾಲಯ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ. ಸಂಸದೆ ಸುಮಲತಾ ಅಂಬರೀಶ್ ಕಾರ್ಯಕ್ರಮದ ವೇದಿಕೆ ಏರಲು ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸುಮಲತಾ ಅಂಬರೀಶ್ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು ಕೈಕೈ ಮಿಲಾಯಿಸುವ ಹಂತಕ್ಕೆ ವಾಗ್ವಾದ ತಲುಪಿತ್ತು.

ಸುಮಲತಾರನ್ನ ವೇದಿಕೆ ಹತ್ತಿಸೋದು ಬೆಡ ಎಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದರೂ ಸಹ   ವಿರೋಧದ ಮಧ್ಯೆ  ಸಂಸದೆ ಸುಮಲತಾ ಅವರನ್ನ ಬೆಂಬಲಿಗರು ವೇದಿಕೆಗೆ ಕರೆದೊಯ್ದರು.

Key words:  MP- Sumalatha Ambarish-supporter-JDS –workers- clash