ಓವರ್’ನಲ್ಲಿ ಆರು ಸಿಕ್ಸರ್: ದಾಖಲೆ ಬರೆದ ಲಿಯೋ ಕಾರ್ಟರ್

Promotion

ನ್ಯೂಜಿಲೆಂಡ್, ಜನವರಿ 06, 01, 2020 (www.justkannada.in): ನ್ಯೂಜಿಲೆಂಡ್ ಪ್ರತಿಷ್ಟಿತ T20 ಟೂರ್ನಿ ಸೂಪರ್ ಸ್ಮ್ಯಾಶ್​ನಲ್ಲಿ ಕ್ಯಾಂಟರ್ಬರಿ ತಂಡದ ಬ್ಯಾಟ್ಸ್​ಮನ್​ ಲಿಯೋ ಕಾರ್ಟರ್ ವಿಶ್ವದಾಖಲೆ ಬರೆದಿದ್ದಾರೆ.

ನಾರ್ದರ್ನ್ ನೈಟ್ಸ್ ತಂಡದ ಎಡಗೈ ಸ್ಪಿನ್ನರ್ ಆಂಟನ್ ಡೆವ್ಸಿಚ್​ರ ಒಂದೇ ಓವರ್​ನಲ್ಲಿ 6 ಸಿಕ್ಸರ್ ಸಿಡಿಸಿದ ಲಿಯೋ ಕಾರ್ಟರ್, ಈ ಸಾಧನೆ ಮಾಡಿದ್ದಾರೆ.

ಆ ಮೂಲಕ ಕಾರ್ಟರ್, ಒಂದೇ ಓವರ್​ನಲ್ಲಿ 6 ಸಿಕ್ಸರ್​ ಸಿಡಿಸಿದ ವಿಶ್ವದ 7ನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.