ಚಿತ್ರದಲ್ಲಿ 15 ನಿಮಿಷ ಕತ್ತರಿ ಹಾಕಿದ ‘ಶ್ರೀಮನ್ನಾರಾಯಣ’ ತಂಡ

ಬೆಂಗಳೂರು, ಜನವರಿ 06, 01, 2020 (www.justkannada.in): ಶ್ರೀಮನ್ ನಾರಾಯಣ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಭರ್ಜರಿ ಯಶಸ್ಸು ಕಂಡಿದೆ.

ಮೊದಲ ವಾರದ ಗಳಿಕೆ ಕಿರಿಕ್ ಪಾರ್ಟಿಗಿಂತ 4 ಪಟ್ಟು ಎಂದು ಹೇಳಲಾಗಿದೆ. ಚಿತ್ರ ಭರ್ಜರಿ ಯಶಸ್ಸು ಕಂಡಿದ್ದರೂ ವಿರಾಮದ ನಂತರ ಚಿತ್ರ ಅನಗತ್ಯವಾಗಿ ಎಳೆಯಲಾಗಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚಿತ್ರ ತಂಡ 15 ನಿಮಿಷದ ದೃಶ್ಯಗಳಿಗೆ ಕತ್ತರಿ ಹಾಕಿದೆ.

ಶ್ರೀಮನ್ ನಾರಾಯಣ ಚಿತ್ರ ಯಶಸ್ವಿ ಪ್ರದರ್ಶನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಹೊರಟಿರುವ ರಕ್ಷಿತ್ ಶೆಟ್ಟಿ ಮತ್ತು ತಂಡ ಪ್ರವಾಸಕ್ಕೂ ಮುನ್ನ ಚಿತ್ರವನ್ನು ಮತ್ತಷ್ಟು ಟ್ರಿಮ್ ಮಾಡಲಾಗಿದ್ದು, 15 ನಿಮಿಷ ಕಡಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.