ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಭಾರಿ ಗದ್ಧಲ, ಗಲಾಟೆ : ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು,ಡಿಸೆಂಬರ್,15,2020(www.justkannada.in):  ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ ಸಂಬಂಧ ಇಂದು ವಿಧಾನಪರಿಷತ್ ಕಲಾಪ ನಡೆಯುತ್ತಿದ್ದು, ಈ ಮಧ್ಯೆ ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲ ಗಲಾಟೆ ನಡೆದಿದೆ.I didn't knew CM BSY will think so cheaply - KPCC President D.K. Shivakumar

ಪರಿಷತ್ ಸಭಾಪತಿ ಸ್ಥಾನದಲ್ಲಿ ಕೂತಿದ್ಧ ಉಪಸಭಾಪತಿ ಧರ್ಮೇಗೌಡರನ್ನ ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದಾರೆ. ಸಭಾಪತಿಸ್ಥಾನದಲ್ಲಿ ಕೂರದಂತೆ ಎಳೆದು ಹಾಕಿದ ಹಿನ್ನೆಲೆ ನಂತರ ಬಿಜೆಪಿ ಸದಸ್ಯರು ಉಪಸಭಾಪತಿ ಧರ್ಮೇಗೌಡರನ್ನ ವಾಪಸ್ ಕರೆ ತಂದು  ಆಸನದಲ್ಲಿ ಕೂರಿಸಲು ಮುಂದಾದರು. ಈ ವೇಳೆ ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದು ತಳ್ಳಾಟ ನೂಕಾಟ ನಡೆದಿದೆ.

ಇನ್ನು ಈ ವೇಳೆ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಬಳಿ ವಸ್ತು ಕಿತ್ತೆಸೆದು ಪೇಪರ್ ಹರಿದು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಭಾರಿ ಗದ್ದಲ ಗಲಾಟೆ ಉಂಟಾಗಿದ್ದು ಮಾರ್ಷೆಲ್ ಗಳು ಪರಿಸ್ಥಿತಿ ನಿಯಂತ್ರಿಸಲು  ಹರಸಾಹಸ ಪಟ್ಟರು.legislative-council-congress-bjp-adjourned

ವಿಧಾನಪರಿಷತ್ ನಲ್ಲಿ ಸಭಾಪತಿ ವಿರುದ್ದದ ಬಿಜೆಪಿಯ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿದೆ. ಇನ್ನು ಭಾರಿ ಗದ್ದಲ ಗಲಾಟೆ ಉಂಟಾದ ಹಿನ್ನೆಲೆ ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಕಲಾಪವನ್ನ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.

english summary…

Commotion in Legislative Council: Wordy duel between Cong and BJP members
Bengaluru, Dec. 15, 2020 (www.justkannada.in): The legislative council witnessed a commotion today during the tabling of the anti-cow slaughter bill and no-confidence motion against the council chairman.legislative-council-congress-bjp-adjourned
The BJP and Congress members landed in a wordy duel leading to the commotion. The JDS has extended its support to the BJP’s no-confidence motion move. Legislative Council Chairman Pratap Chandrashetty has adjourned the house indefinitely.
Keywords: Legislative Council/ Commotion/ BJP/ Congress

Key words: legislative- council-congress-bjp- -adjourned