ಪರಿಷತ್ ನಲ್ಲಿ ಹೈಡ್ರಾಮ : ಸಭಾಪತಿ ಪೀಠವನ್ನ ಉಪಸಭಾಪತಿ ಆಕ್ರಮಿಸಿಕೊಂಡಿದ್ದರು ಎಂದು ಆರೋಪಿಸಿದ ಎಸ್.ಆರ್ ಪಾಟೀಲ್ …

ಬೆಂಗಳೂರು,ಡಿಸೆಂಬರ್,15,2020(www.justkannada.in):  ವಿಧಾಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಗದ್ದಲ ಗಲಾಟೆ ನಡೆದು ವಿಧಾನ ಪರಿಷತ್ ಕಲಾಪವನ್ನ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.I didn't knew CM BSY will think so cheaply - KPCC President D.K. Shivakumar

ಅನಿರ್ಧಿಷ್ಟಾವಧಿಗೆ ಕಲಾಪ ಮುಂದೂಡಿಕೆಯಾದರೂ ಸಹ ಕಾಂಗ್ರೆಸ್ –ಬಿಜೆಪಿ ಸದಸ್ಯರ ನಡುವೆ ಗದ್ದಲ, ವಾಕ್ಸಮರ ಮುಂದುವರೆಯಿತು. ಈ ಬಗ್ಗೆ ಮಾತನಾಡಿದ ಎಸ್.ಆರ್ ಪಾಟೀಲ್ , ಸಭಾಪತಿ ಪೀಠವನ್ನ ಉಪಸಭಾಪತಿ ಆಕ್ರಮಿಸಿಕೊಂಡಿದ್ದರು ಎಂದು ಆರೋಪ ಮಾಡಿದ್ದಾರೆ.continued-riots-legislative-council-sr-patil-accused-occupying-chairperson-seat

ಇನ್ನು ಹಾಗೆಯೇ ಬಿಜೆಪಿ ಸದಸ್ಯರ ನಡೆ ಖಂಡಿಸಿದ ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೊಡ್,   ಸಭಾಪತಿ ಬರದಂತೆ ಬಿಜೆಪಿ ಸದಸ್ಯರು ತಡೆದಿದ್ದರು. ಹೀಗಾಗಿ ಗದ್ದಲ ಉಂಟಾಗಿ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಬಿಜೆಪಿಯವರ ಈ ನಡೆ ಖಂಡನೀಯ ಎಂದು ಕಿಡಿಕಾರಿದರು.

Key words: Continued –riots- : legislative- council -SR Patil -accused – occupying- Chairperson’- seat