ನಾಯಕತ್ವ ಬದಲಾವಣೆ ಆಗುವುದಾದರೇ ವೀರಶೈವ ಸಮುದಾಯಕ್ಕೆ ಸಿಎಂ ಹುದ್ದೆ ನೀಡಲಿ- ಸ್ವಾಮೀಜಿಗಳಿಂದ ಆಗ್ರಹ.

ಬೆಂಗಳೂರು,ಜುಲೈ,21,2021(www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಾಗುತ್ತಿದ್ದು ಈ ನಡುವೆ ವಿವಿಧ ಮಠಾಧೀಶರು ಸಿಎಂ ಬಿಎಸ್ ಯಡಿಯೂರಪ್ಪ ಪರ ನಿಂತಿದ್ದಾರೆ.jk

ಈ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ ಕೊಳದ ಮಠದ ಡಾ.ಶಾಂತವೀರ ಶ್ರೀಗಳು, ಯಡಿಯೂರಪ್ಪ ಬದಲಾವಣೆ ವಿಚಾರ ಕುರಿತು ಊಹಾಪೋಹ ಕೇಳಿ ಬರುತ್ತಿದೆ. ವೀರಶೈವ ಲಿಂಗಾಯತ ಜನಾಂಗದವರು ಐವತ್ತಕ್ಕು ಹೆಚ್ಚು ಜನ ಸ್ಥಾನದಲ್ಲಿದ್ದಾರೆ. ಸಮುದಾಯವನ್ನು ಕಡೆಗಣಿಸುವ ಕೆಲಸ ಆಗಬಾರದು. ನಾಯಕತ್ವ ಬದಲಾವಣೆ ಮಾಡುವುದಾದರೆ ವೀರಶೈವ ಲಿಂಗಾಯತರಿಗೆ ನಾಯಕತ್ವ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಸಿಎಂ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಆಗುವುದಾದರೆ ವೀರಶೈವ ಸಮುದಾಯದವರಿಗೇ ಸಿಎಂ ಹುದ್ದೆ ನೀಡಬೇಕು. ಅರವಿಂದ ಬೆಲ್ಲದ್ ಅಥವಾ ಯಾರನ್ನಾದರೂ ಸಿಎಂ ಮಾಡಲಿ. ನಾವು ಯಾರ ಪರವಾಗೂ ಇಲ್ಲ, ವಿರೋಧವಾಗಿಯೂ ಇಲ್ಲ. ವೀರಶೈವ ಧರ್ಮ ಉಳಿಸುವುದಕ್ಕಾಗಿ ನಮ್ಮ ಹೋರಾಟವೆಂದು ಕೊಳದ ಮಠದ ಸ್ವಾಮೀಜಿ ಹೇಳಿದರು.

 ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬೆಳ್ಳಾವಿ ಕಾರದೇಶ್ವರ ಮಠದ ವೀರಬಸವ ಸ್ವಾಮೀಜಿ, ಸಿಎಂ ಬಿ ಎಸ್ ವೈ ಕೆಳಗಿಳಿಸಿದರೆ ಬಿಜೆಪಿಗೆ ಕಠಿಣ ಸ್ಥಿತಿ ಬರುತ್ತದೆ. ಯಡಿಯೂರಪ್ಪನವರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ನಾಲ್ಕು ಬಾರಿ ಸಿಎಂ ಆಗಿದ್ದರೂ ಅವರಿಗೆ ಪದೇ ಪದೇ ಮಾನಸಿಕ ಕಿರುಕುಳ ನೀಡುವುದು ಸರಿಯಲ್ಲ. ಎಷ್ಟೇ ತೊಂದರೆ, ಅಡ್ಡಿ ಆತಂಕಗಳಿದ್ದರೂ ಇಳಿ ವಯಸ್ಸಿನಲ್ಲಿ ಒಳ್ಳೆಯ ಆಡಳಿತ ನಡೆಸುತ್ತಿರುವ ಬಿ ಎಸ್ ವೈಗೆ ಪೂರ್ಣಾವಧಿ ಮುಗಿಸಲು ಅವಕಾಶ ನೀಡಬೇಕು ಹೇಳಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ಪರ  ಸಾರಂಗದೇಶ್ವರ ಸ್ವಾಮೀಜಿ ಬ್ಯಾಟಿಂಗ್..

ಕಲ್ಬುರ್ಗಿಯಲ್ಲಿ ಮಾತನಾಡಿ ಸಚಿವ ಮುರುಗೇಶ್ ನಿರಾಣಿ ಪರ  ಬ್ಯಾಟ್ ಬೀಸಿರುವ ಶ್ರೀಶೈಲ ಸಾರಂಗಮಠದ ಸಾರಂಗದೇಶ್ವರ ಸ್ವಾಮೀಜಿ, ಸಿಎಂ ಸ್ಥಾನದಿಂದ ಬಿಎಸ್ ವೈರನ್ನ ಇಳಿಸಬಾರದು.  ಬಿಎಸ್ ವೈ ಬದಲಿಸಿದ್ರೆ ಸಚಿವ ಮುರುಗೇಶ್ ನಿರಾಣಿಗೆ ಸ್ಥಾನ ನೀಡಿ. ಉತ್ತರ ಕರ್ನಾಟಕದ ನಾಯಕನಿಗೆ ಸ್ಥಾನ ನೀಡಿ. ಪಂಚಮಸಾಲಿ ಸಮುದಾಯಕ್ಕೆ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ENGLISH SUMMARY….

Seers in Karnataka say if CM is changed Veerashaivaite should be made CM
Bengaluru, July 21, 2021 (www.justkannada.in): Discussions over a change in Chief Minister are gaining momentum. However, seers of various maths are backing Chief Minister B.S. Yediyurappa.
In the meantime, in a press meet held in Bengaluru, Dr. Shantaveera Sri of the Kolada Math, Bengaluru, said that rumors are making rounds that B.S. Yediyurappa will be removed from his Chief Minister post. “There are more than 50 people in power belonging to the Veerashaiva Lingayat community in the State and no effort should be made to neglect them. In case if it is inevitable to change the leadership a person belonging to the Veerashaiva Lingayat community only should be made the Chief Minister,” he demanded.
Speaking in Kalaburagi, Sri Sarangeshwara Swamiji of the Srishaila Saarangamatha spoke in support of Minister Murugesh Nirani. However, he mentioned that B.S. Yediryurappa should not be removed from his post. “If at all he is removed Murugesh Nirani should be made the Chief Minister,” he demanded.

Keywords: Chief Minister/ B.S. Yediyurappa/ change of power/ rumours/ seers/ Veerashaiva/ Lingayat

Key words: Leadership -change – CM- veerashaiva-community-Swamiji