ಬೆಂಗಳೂರಿನಲ್ಲಿ ನಮ್ಮ ಮೆಟ್ರೊ ಸಮಯ ವಿಸ್ತರಣೆ.

0
137

ಬೆಂಗಳೂರು, ಜುಲೈ 21,2021 (www.justkannada.in): ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿನ ‘ನಮ್ಮ ಮೆಟ್ರೊ’ ಸೇವೆಗಳನ್ನು ಮಂಗಳವಾರದಿMದ ರಾತ್ರಿ 9.೦೦ ಗಂಟೆಯವರೆಗೆ ವಿಸ್ತರಿಸಿದೆ.jk

ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.1ಕ್ಕಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಅನ್ನು ತೆರವುಗೊಳಿಸಿದ ಕಾರಣದಿಂದಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕೋವಿಡ್-19ರಿಂದಾಗಿ ಮೆಟ್ರೊ ಸೇವೆಗಳನ್ನು ಸ್ಥಗಿತಗೊಳಿಸಿದ್ದ ಕಾರಣ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ರೂ.೯೦೪.೨೬ ಕೋಟಿಗಳಷ್ಟು ನಷ್ಟ ಅನುಭವಿಸಿದೆ.

ಜೂನ್ 5 ರಂದು ರಾಜ್ಯ ಸರ್ಕಾರ ನಮ್ಮ ಮೆಟ್ರೊ ಸೇವೆಗಳನ್ನು ಶೇ.100ರಷ್ಟು ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ಆರಂಭಿಸಲು ಅನುಮತಿ ನೀಡಿತ್ತು. ಈಗ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸೇವೆಗಳನ್ನು ವಿಸ್ತರಿಸಿದೆ. ಪ್ರಯಾಣಿಕರು ಟೋಕನ್‌ ಗಳನ್ನು ಕೌಂಟರ್‌ಗಳಲ್ಲಿ ಪಡೆದು ಪ್ರಯಾಣಿಸಬಹುದಾಗಿದೆ.

Key words: Expansion -our Metro -Time -Bangalore