ಮರಾಠಿಯಲ್ಲಿ ಮಾತನಾಡಿದ್ದನ್ನ ವಿರೋಧಿಸಿ ಪೋಸ್ಟ್ ಹಾಕಿದ್ದ ಯುವಕನಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಂದ ಬೆದರಿಕೆ…

Promotion

ಬೆಳಗಾವಿ,ಸೆ,25,2019(www.justkannada.in): ರಾಣಿ ಚೆನ್ನಮ್ಮನ ಪುತ್ಥಳಿ ಮುಂದೆ ನಿಂತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿಯಲ್ಲಿ ಮಾತನಾಡಿದ್ದನ್ನ ವಿರೋಧಿಸಿ ಪೋಸ್ಟ್ ಹಾಕಿದ್ದ ಯುವಕನಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ  ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಪವನ ಮಹಾಲಿಂಗಪುರ ಎಂಬ ಯುವಕನಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಹೆಬ್ಬಾಳ್ಕರ್ ಫೇಸ್ ಬುಕ್ ನಲ್ಲಿ  ಬೆದರಿಕೆ ಮೆಸೇಜ್ ಕಳುಹಿಸಿದ್ದು, ಮೇಡಂ ವಿರುದ್ದ ಇನ್ನೊಮ್ಮೆ ಪೋಸ್ಟ್ ಮಾಡಿದ್ರೆ ನಿನ್ನನ್ನ ಸುಮ್ಮನೆ ಬಿಡೋದಿಲ್ಲ. ನಿಮ್ಮ ಮನೆಗೆ ನೇರವಾಗಿ ಬರ್ತಿನಿ, ಬಿಸಿ ಮಾಡೋದಿದೆ, ನೋಡ್ತಾಯಿರು ಎಂದು ಬೆದರಿಕೆ ಹಾಕಲಾಗಿದೆ.

ನಿನ್ನೆ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿಯಲ್ಲಿ ಮಾತನಾಡಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕನ್ನಡ ಮಾತನಾಡುವಂತೆ ಒತ್ತಾಯಿಸಿದಾಗ ಲಕ್ಷ್ಮೀ ಹೆಬ್ಬಾಳ್ಕರ್ ಕನ್ನಡ ಮಾತನಾಡಿದ್ದರು.

ರಾಣಿ ಚೆನ್ನಮ್ಮನ ಪುತ್ಥಳಿ ಮುಂದೆ ನಿಂತು ಲಕ್ಷ್ಮೀ ಹೆಬ್ಬಾಳ್ಕರ್  ಮರಾಠಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

Key words: Laxmi Hebbalkar’s –son- threatened – Young man –post-belgavi