ಲ್ಯಾನ್ಸ್ ಡೌನ್ ಬಿಲ್ಡಿಂಗ್ ನೆಲಸಮ ವಿಚಾರ: ನ್ಯಾಯಾಲಯದ ಅನುಮತಿ ಪಡೆದು ಮುಂದಿನ ಕ್ರಮ- ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ.

Promotion

ಮೈಸೂರು,ಮೇ,31,2022(www.justkannada.in): ನಗರದ ಲ್ಯಾನ್ಸ್ ಡೌನ್ ಬಿಲ್ಡಿಂಗ್ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ.

ಲ್ಯಾನ್ಸ್ ಡೌನ್ ಬಿಲ್ಡಿಂಗ್  ಪಾರಂಪರಿಕ ಕಟ್ಟಡವಾಗಿರುವ ಕಾರಣ ಸಮಿತಿಯಿಂದ ನೆಲಸಮಕ್ಕೆ ಅನುಮತಿ ದೊರೆತಿದೆ. ಪ್ರಕರಣ ಹೈ ಕೋರ್ಟ್ ನಲ್ಲಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು. ಈಗಾಗಲೇ ಪಾರಂಪರಿಕ ಸಮಿತಿಯು ಕಟ್ಟಡದಲ್ಲಿ ಸದೃಢವಾಗಿಲ್ಲ ಎಂದು ರಿಪೋರ್ಟ್ ನೀಡಿದೆ. ನ್ಯಾಯಾಲಯದ ಆದೇಶದ ಮೂಲಕ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

ಇನ್ನೂ ವಿಶ್ವ ಯೋಗದಿನದಂದು ನಗರ ಬಸ್ ನಿಲ್ದಾಣ ತಾತ್ಕಾಲಿಕ ಶಿಫ್ಟ್ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮೀಕಾಂತ ರೆಡ್ಡಿ, ಸದ್ಯ ಪ್ರಧಾನಿಗಳು ಆಗಮಿಸಲಿರುವ ರಸ್ತೆಗಳ ಗುಂಡಿಗಳ ಸರಿಪಡಿಸಲು ಮುಂದಾಗಿದ್ದೇವೆ. ನಗರ ಬಸ್ ನಿಲ್ದಾಣ ತಾತ್ಕಾಲಿಕ ಶಿಫ್ಟ್ ಮಾಡುವ ಬಗ್ಗೆ ನಗರ ಪೊಲೀಸ್ ಆಯುಕ್ತರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

Key words: Lansdowne-Building Demolition-mysore- city-corporation-Commissioner -Lakshmikantha Reddy.