Sunday, August 2, 2026

BDA Apartments

Home Crime ಯೋಧನ ಮೇಲೆ ದರ್ಪ ತೋರಿದ ಆರೋಪ: ಮೈಸೂರು ಉಪಮೇಯರ್ ಅನ್ವರ್ ಬೇಗ್ ವಿರುದ್ಧ ದೂರು.

ಯೋಧನ ಮೇಲೆ ದರ್ಪ ತೋರಿದ ಆರೋಪ: ಮೈಸೂರು ಉಪಮೇಯರ್ ಅನ್ವರ್ ಬೇಗ್ ವಿರುದ್ಧ ದೂರು.

ಮೈಸೂರು,ಮೇ,31,2022(www.justkannada.in): ಮೈಸೂರು ಮಹಾನಗರ ಪಾಲಿಕೆ ಉಪಮೇಯರ್ ಅನ್ವರ್ ಬೇಗ್ ವಿರುದ್ಧ ದೇಶ ಕಾಯುವ ಯೋಧನ ಮೇಲೆ ದರ್ಪ ತೋರಿಸಿದ ಆರೋಪ ಕೇಳಿ ಬಂದಿದೆ.

ಯೋಧ ಪ್ಹಾಜಿಲ್ ಮೇಲೆ ಅನ್ವರ್ ಬೇಗ್ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಯೋಧನ ಕುಟುಂಬಸ್ಥರು ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಾವ ಕೊಟ್ಟ ಆಸ್ತಿಯಲ್ಲಿ ಮನೆ ಕಟ್ಟಲು ಮುಂದಾಗಿದ್ದ ಯೋಧ ಪಾಜಿಲ್  ಮೇಲೆ ಹಲ್ಲೆ  ಮಾಡಲು ಯತ್ನಿಸಿದ್ದಾರೆ. ಈ ಸಂಬಂಧ ರಾಜೀವ್ ನಗರದ ಮನೆ ಬಳಿ ಗಲಾಟೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ ಎನ್ನಲಾಗುತ್ತಿದೆ.  ಇದೀಗ ನ್ಯಾಯಾಕ್ಕಾಗಿ ಯೋಧನ ಕುಟುಂಬಸ್ಥರು ಪೊಲೀಸ್ ಅಯುಕ್ತರ ಮೊರೆ ಹೋಗಿದ್ದಾರೆನ್ನಲಾಗಿದೆ.

Key words: mysore-soldier-assult-Mysore -Deputy Mayor- Anwar Beg