ಹಾಸನಕ್ಕೆ ತಟ್ಟದ ಬಂದ್ ಬಿಸಿ: ನಿರಾತಂಕವಾಗಿ ಸಾಗಿದ ಸಾರಿಗೆ ಬಸ್ ಸಂಚಾರ…

Promotion

ಹಾಸನ,ಜ,8,2020(www.justkannada.in):  ಕೇಂದ್ರ ಕಾರ್ಮಿಕ ನೀತಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಇಂದು ಮುಷ್ಕರ ನಡೆಸುತ್ತಿದ್ದು ಹಾಸನದಲ್ಲಿ ಬಂದ್ ಬಿಸಿ ತಟ್ಟಿಲ್ಲ. ಎಂದಿನಂತೆ ಬಸ್ ಸಂಚಾರವಿದ್ದು ಶಾಲಾಕಾಲೇಜುಗಳು ತೆರೆದಿದ್ದವು.

ಸಾರಿಗೆ ಬಸ್ ಸಂಚಾರ ಯಥಾಸ್ಥಿತಿ, ನಗರ ಹಾಗೂ ಗ್ರಾಮೀಣ ಮತ್ತು ಹೊರ ಜಿಲ್ಲೆಗಳ ಬಸ್ ಸಂಚಾರ ಇತ್ತು. ಆಟೋ ಹಾಗೂ ಇತರೆ ವಾಹನಗಳ ಓಡಾಟವೂ ಮಾಮೂಲಿಯಾಗಿತ್ತು. ಹಾಸನದಿಂದ ಬೆಳಗ್ಗೆ ಯಿಂದ ಈವರೆಗೆ ಸುಮಾರು 240 ಬಸ್ ಗಳ ಸಂಚಾರ ನಡೆಸಿದ್ದು , ಹಾಸನದಿಂದ ಬೆಂಗಳೂರು,ಮಂಗಳೂರು, ಮೈಸೂರು, ಮಡಿಕೇರಿ ಸೇರಿ ವಿವಿಧೆಡೆಗೆ ಸಂಚರಿಸುತ್ತಿವೆ.

ಇನ್ನು ಬಸ್ ಇದ್ದರೂ ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಭಣ ಭಣಗುಡುತಿತ್ತು. ಜನರ ಕೊರತೆ ನಡುವೆಯೂ ಬಸ್ ಗಳು ಓಡಾಡುತ್ತಿದ್ದು. ಬಸ್ ಗಳ ಸಂಚಾವಿದ್ದರೂ ಜನರಿಲ್ಲದೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಕೆಲವಡೆ ಅಂಗಡಿ ಮುಂಗಟ್ಟುಗಳ ಬಂದ್ ಆದರೇ ಹಲವು ಕಡೆಗಳಲ್ಲಿ ಎಂದಿನಂತೆ ಅಂಗಡಿಗಳು ತೆರೆದಿದ್ದವು.

Key words: labor stricke- Hassan – bus -traffic.