ಕುರುಬ ಎಸ್.ಟಿ.ಹೋರಾಟ ಸಮಿತಿ  ಕರ್ನಾಟಕ ಪದಾಧಿಕಾರಿಗಳ ನೇಮಕ…

Promotion

ಬೆಂಗಳೂರು,ಸೆಪ್ಟಂಬರ್,29,2020(www.justkannada.in): ಕುರುಬರ ಎಸ್.ಟಿ.ಹೋರಾಟ ಸಮಿತಿ ಕರ್ನಾಟಕ ಪದಾಧಿಕಾರಿಗಳನ್ನ ನೇಮಕ ಮಾಡಲಾಗಿದೆ.jk-logo-justkannada-logo

ಇತ್ತೀಚಿಗೆ ಕಾಗಿನೆಲೆ ಮಹಾಸಂಸ್ಥಾನದ  ಸ್ವಾಮೀಜಿಗಳಾದ ನಿರಂಜನಾನಂದಪುರಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿನ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮನೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದಂತೆ ರಾಜ್ಯ ಹೋರಾಟ ಸಮಿತಿಗೆ ಪದಾಧೀಕಾರಿಗಳನ್ನು ನೇಮಿಸಲಾಗಿದೆ.

ಕುರುಬರ ಎಸ್.ಟಿ.ಹೋರಾಟ ಸಮಿತಿ ಕರ್ನಾಟಕ ಇದಕ್ಕೆ ಮಹಾ ಮಾರ್ಗದರ್ಶಕರಾಗಿ ಕಾಗಿನೆಲೆ ಮಹಾಸಂಸ್ಥಾನದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ, ಕಾಗಿನೆಲೆ ಶಾಖಾ ಮಠ ಹೊಸದುರ್ಗದ ಶ್ರೀ ಈಶ್ವರಾನಂದಪುರಿ  ಮಹಾಸ್ವಾಮೀಜಿಗಳು, ಹಾಗೆಯೇ ತಿಂಥಣೀ ಕಾಗಿನೆಲೆ ಶಾಖಾಮಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ಮತ್ತು ಮೈಸೂರು ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿ ಅವರನ್ನ ನೇಮಕ ಮಾಡಲಾಗಿದೆ. kuruba-st-horata-committee-appoints-karnataka-officers

ಹೋರಾಟ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಹೆಚ್.ವಿಶ್ವನಾಥ್, ಬಂಡೆಪ್ಪ ಖಾಶ್ಯಂಪೂರ್ ಅವರನ್ನ ನೇಮಕ ಮಾಡಲಾಗಿದೆ.

ಇನ್ನು ಹೋರಾಟ ಸಮಿತಿ ಅಧ್ಯಕ್ಷರಾಗಿ  ಕೆ.ವಿರುಪಾಕ್ಷಪ್ಪ ರವರನ್ನುನೇಮಿಸಲಾಗಿದೆ ಎಂದು ಕಾಗಿನೆಲೆ ಮಹಾಸಂಸ್ಥಾನ ಬೆಳ್ಳೊಡಿ ಮಠ ಹರಿಹರ ತಾಲ್ಲೂಕು ದಾವಣಗೆರೆ ಜಿಲ್ಲೆಯ ಶ್ರೀಮಠ ತಿಳಿಸಿದೆ.

Key words: kuruba-ST Horata Committee –appoints- Karnataka -Officers