ಯೂನಿಫಾರ್ಮ್ ಹಾಕಿ ಬಸ್ ಚಾಲನೆ : ಕೆಎಸ್ ಆರ್ ಟಿಸಿ ಬಸ್‌‌ ಡ್ರೈವರ್ ಆದ ಶಾಸಕ ಎಂಪಿ ರೇಣುಕಾಚಾರ್ಯ….

Promotion

ದಾವಣಗೆರೆ,ಜ,5,2020(www.justkannada.in):  ಅಂದು ತೆಪ್ಪ ನಡೆಸಿ ಸುದ್ದಿಯಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಇಂದು ಕೆ.ಎಸ್ ಆರ್ ಟಿಸಿ ಬಸ್ ಚಾಲನೆ ಮಾಡುವ ಮೂಲಕ ಎಲ್ಲರ  ಗಮನ ಸೆಳೆದಿದ್ದಾರೆ.

ಹೌದು, ಶಾಸಕ ರೇಣುಕಾಚಾರ್ಯ ಕೆ ಎಸ್ ಆರ್ ಟಿಸಿ ಯೂನಿಫಾರಂ ಹಾಕಿ ಕೆಎಸ್ಸಾರ್ಟಿಸಿ ಬಸ್‌‌ ಚಲಾಯಿಸಿದರು. ಇಂದು ಹೊನ್ನಾಳಿ ಕ್ಷೇತ್ರದಲ್ಲಿ ಬೆನಕನಹಳ್ಳಿಯಿಂದ ಉಜನಿಪುರ, ಹಿರೇಬಸೂರು, ಹೊಟ್ಯಾಪುರ, ರಾಂಪುರ, ಬಳ್ಳಾಪುರ ಮಾರ್ಗವಾಗಿ ಸಾಸ್ವೇಹಳ್ಳಿವರೆಗೆ ಹೊಸ ಬಸ್ ಸೇವೆ ಆರಂಭಿಸಲಾಯಿತು.

ಈ ವೇಳೆ ಹೊನ್ನಾಳಿ ಮತಕ್ಷೇತ್ರದ ಬೆನಕನಹಳ್ಳಿಯಲ್ಲಿ ಶಾಸಕ ರೇಣುಕಾಚಾರ್ಯ ಬಸ್ ಚಾಲನೆ ಮಾಡಿದರು. ರೇಣುಕಾಚಾರ್ಯ ಅವರಿಗೆ ಬೆಂಬಲಿಗರು ಹುರುದುಂಬಿಸಿ ಬಸ್ ಚಾಲನೆಗೆ ಪ್ರೋತ್ಸಹಿಸಿದರು. ಬಸ್ ಚಾಲನೆ ವೇಳೆ ಎಂ.ಪಿ ರೇಣುಕಾಚಾರ್ಯ ಬಸ್ ಸಂಚರಿಸುವ ಮಾರ್ಗದ ಗ್ರಾಮಗಳ ಹೆಸರು ಕೂಗಿ ಬಸ್ ನಲ್ಲಿದ್ದವರನ್ನ ರಂಜಿಸುತ್ತಿದ್ದರು. ಹಾಗೆಯೇ ಸೇತುವೆ ಕ್ರಾಸ್ ಮಾಡುವಾಗ ಎದೆ ಢವ ಢವ ಎನ್ನುತ್ತದೆ ಎಂದು ತಮಾಷೆ ಮಾಡಿ ಬೆಂಬಲಿಗರು ನಗೆಗಡಲಲ್ಲಿ ತೇಲುವಂತೆ ಮಾಡಿದರು.

Key words: ksrtc-Uniform – bus driving-MLA-MP Renuka Acharya -driverDavanagere