ಚಿತ್ರಸಂತೆಗೆ ಬಜೆಟ್ ನಲ್ಲಿ ಒಂದು ಕೋಟಿ ಅನುದಾನ- ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

ಬೆಂಗಳೂರು,ಜ,5,2020(www.justkannada.in):  ಚಿತ್ರಸಂತೆಗೆ ಬಜೆಟ್ ನಲ್ಲಿ ಒಂದು ಕೋಟಿ ಅನುದಾನ ನೀಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಚಿತ್ರಕಲಾ ಪರಿಷತ್ ವತಿಯಿಂದ ಮನೆಗೊಂದು ಕಲಾಕೃತಿ ಶಿರ್ಷಿಕೆಯಡಿ ಆಯೋಜಿಸಿದ್ದ 17ನೇ ಚಿತ್ರಸಂತೆಗೆ  ಇಂದು  ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು. ಚಿತ್ರಸಂತೆಯಲ್ಲಿ ನೂರಾರು ಕಲಾವಿದರು ಭಾಗಿಯಾಗಿದ್ದು, ಅಲ್ಲಿನ ಕಲರ್ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ.

ಚಾಲನೆ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸಾರ್ವಜನಿಕರು ಚಿತ್ರಕಲಾವಿದರ ಚಿತ್ರಗಳನ್ನು ಖರೀದಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು. ಈ ಚಿತ್ರಸಂತೆಯನ್ನು ರೈತರಿಗೆ ಸಮರ್ಪಿಸಿರುವುದು ನನಗೆ ಅಧಿಕ ಸಂತಸ ತಂದಿದೆ.  18 ರಾಜ್ಯಗಳಿಂದ ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿದ್ದಾರೆ. ಚಿತ್ರಸಂತೆ ಎಲ್ಲರ ಗಮನ ಸೆಳೆಯುತ್ತದೆ. ಚಿತ್ತಾರಗಳು ಚಿತ್ತಗಳನ್ನು ಸೆಳೆಯುತ್ತಿವೆ ಎಂದರು.

ಮಧ್ಯವರ್ತಿಗಳ ಕಾಟವಿಲ್ಲದೇ ಕಲೆಯನ್ನು ನೇರಾ ಮಾರಾಟ ಮಾಡುವುದು ಖುಷಿಯ ವಿಚಾರ. ನಾವೆಲ್ಲ ರಸ್ತೆಯಲ್ಲಿರುವ ಚಿತ್ರಗಳನ್ನು ನೋಡಲು ಒಂದು ದಿನ ಸಾಲುವುದಿಲ್ಲ. ಇನ್ನು ಚಿತ್ರಸಂತೆಗೆ ಬಜೆಟ್​​​ನಲ್ಲಿ 1 ಕೋಟಿ ರೂ ಕೊಡುವ ಮೂಲಕ ನಿಮ್ಮ ಸರ್ಕಾರ ಜೊತೆಗಿರಲಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

Key words: One crore- grant – budget –chitrasanthe -CM BS Yeddyurappa.