“ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಆರಂಭ, ಖಾಸಗಿ ಬಸ್ ಮಾಲೀಕರಿಂದ ಪ್ರತಿಭಟನೆ”

ಮೈಸೂರು,ಏಪ್ರಿಲ್,18,2021(www.justkannada.in) : ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಆರಂಭ ಹಿನ್ನೆಲೆ ಮೈಸೂರಲ್ಲಿ ಖಾಸಗಿ ಬಸ್ ಮಾಲೀಕರಿಂದ ಪ್ರತಿಭಟನೆ ನಡೆಸಲಾಯಿತು.jkಸರ್ಕಾರ ನಮ್ಮನ್ನ ಟಿಸ್ಸು ಪೇಪರ್ ರೀತಿ ಬಳಸಿಕೊಳ್ಳುತ್ತಿದೆ. ಅವಶ್ಯಕತೆ ಬಿದ್ದಾಗ ಮಾತ್ರ ನಾವು ಸರ್ಕಾರಬೇಕು. ಅವಶ್ಯಕತೆ ಮುಗಿದ ಬಳಿಕ ನಮ್ಮನ್ನ ಬೀದಿಪಾಲು ಮಾಡುತ್ತೆ ಎಂದು ಸರ್ಕಾರದ ವಿರುದ್ಧ ಖಾಸಗಿ ಬಸ್ ಚಾಲಕ ನಿರ್ವಾಹಕರು ಆಕ್ರೋಶವ್ಯಕ್ತಪಡಿಸಿದರು.

ಒಂದು ತಿಂಗಳ ಕಾಲ ಪರ್ಮಿಟ್ ಕೊಟ್ಟ ಸರ್ಕಾರ ಈಗ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಹೊರಗಟ್ಟಿದೆ. ನಾವು ಎಲ್ಲಿಗೆ ಹೋಗಬೇಕು ನಮಗೂ ಸಂಸಾರ ಮಕ್ಕಳು ಇವೆ ಎಂದು ಬೇಸರವ್ಯಕ್ತಪಡಿಸಿದರು.

 KSRTC Bus-Traffic-Launches-Protest-private-bus-owners 

ನಾವು ಸಂಕಷ್ಟದಲ್ಲಿದೀವಿ,ಈಗ ನಮ್ಮ ಟೂರಿಸ್ಟ್ ಲೈನ್ ಗಳು ಸಹ ಕ್ಲೋಸ್ ಆಗಿವೆ. ಸದ್ಯ ಟೂರಿಸ್ಟ್ ಬಾಡಿಗೆಯೂ ಇಲ್ಲಾ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಸಂಚಾರವೂ ಇಲ್ಲ ಎಂದು ಖಾಸಗಿ ಬಸ್ ಚಾಲಕ ನಿರ್ವಾಹಕರ ಅಳಲು ತೋಡಿಕೊಂಡರು.

key words : KSRTC Bus-Traffic-Launches-Protest-private-bus-owners