ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಖಂಡಿತ- ಡಾ.ಬೆಟಸೂರಮಠ.

kannada t-shirts

 ಮೈಸೂರು,ಜೂನ್,29,2022(www.justkannada.in): ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಖಂಡಿತ ಎಂದು ಜೆ.ಎಸ್.ಎಸ್. ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಬೆಟಸೂರಮಠ ಅವರು ಹೇಳಿದರು.

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 45 ದಿನಗಳ ಕಾಲದ ಯುಜಿಸಿ-ನೆಟ್ ಕೆ-ಸೆಟ್ ಮತ್ತು ಪರೀಕ್ಷಾ ತರಬೇತಿ ಶಿಬಿರ ಉದ್ಘಾಟಿಸಿ ಸಿ.ಜಿ ಬೆಟಸೂರಮಠ ಮಾತನಾಡಿದರು.

ಮುಂದಿನ ದಿನಗಳಲ್ಲಿ ಅಧ್ಯಾಪಕರಾಗುವ ತಮಗೆ ಇತಿಹಾಸ ಮತ್ತು ವಿಜ್ಞಾನದ ಅರಿವಿನ ಜೊತೆಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಲವು ಆಯ್ಕೆಗಳಿದ್ದು, ಯಾವುದೇ ಗೊಂದಲಕ್ಕೊಳಗಾಗದೆ ನಮಗೆ ಯೋಗ್ಯ ಮಾರ್ಗ ಆಯ್ಕೆಮಾಡಿಕೊಂಡು ಅದರಲ್ಲಿ ಪರಿಶ್ರಮ ಪಟ್ಟರೆ ಜೀವನದಲ್ಲಿ ಮುಂದೆ ಬರಬಹುದು. ಜೊತೆಗೆ ಇಂತಹ ಪರೀಕ್ಷೆಗಳಲ್ಲಿ ವೈಫಲ್ಯತೆ ಕಂಡಾಗ ಕಂಗಾಲಾಗದೆ ಮತ್ತೆ ಮತ್ತೆ ಪ್ರಯತ್ನಿಸಬೇಕು. ಭವಿಷ್ಯದ ಬಗ್ಗೆ ತಾವು ತಳೆದಿರುವ ದೃಢ ನಿಲುವು ಸ್ವಾಗತಾರ್ಹ. ಬೋಧನಾ ಕ್ಷೇತ್ರಕ್ಕೆ ಕಾಲಿರಿಸುತ್ತಿರುವ ನಿಮ್ಮ ಪ್ರಯತ್ನ ಬಹಳ ಮುಖ್ಯವಾದದ್ದು. ನಿಮ್ಮ ಗುರಿ ಸರಿ ಇದ್ದಾಗ ನಿಖರವಾಗಿ ತಲುಪಬಹುದು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿ ಶುಭಹಾರೈಸಿ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಮಾರ್ಗದರ್ಶನ ನೀಡುತ್ತ ಕಲಿಕಾರ್ಥಿಗಳಿಗೆ, ನಾನು ಸೇರಿದಂತೆ ನಮ್ಮ ಕರಾಮುವಿಯು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಸಿದ್ಧವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳು ವಿಫುಲವಾಗಿದ್ದರೂ ಪ್ರತಿಸ್ಪರ್ಧಿಗಳು ಹೆಚ್ಚು, ಹೀಗಾಗಿ ಹೆಚ್ಚಿನ ಅಧ್ಯಯನ ಮತ್ತು ವಿಷಯಗಳ ಬಗ್ಗೆ ಆಳ ಜ್ಞಾನ ಹೊಂದಿರುವುದು ಅವಶ್ಯಕ. ಇಂದಿನ ಯುವಜನತೆಯ ಉತ್ಸಾಹ ಕಂಡು ನನಗೂ ಪಾಠ ಮಾಡಬೇಕು, ನಿಮ್ಮೊಂದಿಗೆ ಸಂವಾದ ಮಾಡಬೇಕು ಎಂಬ ಬಯಕೆ. ನಮ್ಮ ಈ 45 ದಿನಗಳ ತರಬೇತಿಯ ಕಾಲಾವಧಿಯಲ್ಲಿ ಕೆಲವು ಗಂಟೆಗಳ ಕಾಲ ನಿಮ್ಮೊಂದಿಗೆ ಸಮಯ ಕಳೆಯುತ್ತೇನೆ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ತಮ್ಮ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಆರ್. ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಇದ್ದರು.

Key words: KSOU- Success – studied – diligence- Dr. Betasuramath

website developers in mysore