ಮಿಸ್ಟರ್ ಈಶ್ವರಪ್ಪ ಕುರುಬರ ಬಗ್ಗೆ ಕಾಳಜಿ ಇದ್ರೆ ಎಸ್.ಟಿ ಸರ್ಟಿಫಿಕೇಟ್ ಕೊಡಿಸು ನೋಡೋಣಾ- ಸಿದ್ಧರಾಮಯ್ಯ ಸವಾಲು.

Promotion

ತುಮಕೂರು,ಮೇ,28,2022(www.justkannada.in): ಮಿಸ್ಟರ್ ಈಶ್ವರಪ್ಪ ಕುರುಬರ ಬಗ್ಗೆ ಕಾಳಜಿ ಇದ್ರೆ ಕೇಂದ್ರ ಸರ್ಕಾರದಿಂದ ಎಸ್.ಟಿ ಸರ್ಟಿಫಿಕೇಟ್ ಕೊಡಿಸು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸವಾಲು ಹಾಕಿದರು.

ತುಮಕೂರಿನಲ್ಲಿ ನಡೆದ ಕುರುಬ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮಗೆ ಕುರುಬರ ಬಗ್ಗೆ ಕಾಳಜಿ ಇದ್ರೆ  ಎಸ್.ಟಿ ಸರ್ಟಿಫಿಕೇಟ್ ಮಾಡಿಸು ನೋಡೋಣಾ. ಈಗ ನಿಮ್ಮದೇ ಸರ್ಕಾರ ಇದೆ. ಸುಮ್ನೆ ಪಾದಯಾತ್ರೆ ಮಾಡ್ತೀರಾ ಈ ಬೂಟಾಟಿಕೆ ಬಿಡಬೇಕು. ಸಭೆಗೆ ಬಂದಿಲ್ಲ ಎಂದು ನನ್ನ ಮೇಲೆ ಗೂಬೆ ಕೂರಿಸ್ತೀಯಾ  ನಾನು ಬಿಜೆಪಿ ಈಶ್ವರಪ್ಪ ನಾಯಕತ್ವದಲ್ಲಿ ಹೋಗಬೇಕಿತ್ತಾ..? ಎಂದು ಗುಡುಗಿದರು.

ಅಧಿಕಾರಕ್ಕಾಗಿ ಪಕ್ಷದ ಬಾಲ ಹಿಡಿದು ಹೋದವನಲ್ಲ. ಸಾಮಾಜಿಕ ಬದ‍್ಧತೆಗಾಗಿ ಇರೋನು. ನಾನು ಹಿಂದುಳಿದ ಜಾತಿ ಬಡವರಿಗೆ ನ್ಯಾಯಾ ಕೊಡಿಸಿದ್ದೇನೆ.  ಆದ್ರಲ್ಲಿ ಯಾವತ್ತು ಹಿಂದೆ ಬಿದ್ದಿಲ್ಲ ಮುಂದೆ ಬೀಳಲ್ಲ. ಅಧಿಕಾರ ಇರಲಿ ಬಿಡಲಿ ಎಂದು ಸಿದ್ಧರಾಮಯ್ಯ ನುಡಿದರು.

Key words: KS  Eshwarappa- ST Certificate –kuruba community-Siddaramaiah