ಕೆಆರ್ ಎಸ್, ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಳ: ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ.

Promotion

ಮೈಸೂರು,ಜುಲೈ,12,2022(www.justkannada.in):  ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಲಾಶಯಗಳು ಭರ್ತಿಯಾಗಿ ನೀರನ್ನ ಹೊರಬಿಡಲಾಗುತ್ತಿದೆ. ಈ ಮಧ್ಯೆ ಕೆಆರ್ ಎಸ್ ಹಾಗೂ ಕಬಿನಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನಲೆ, ತಲಕಾಡಿನ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರಿಗೆ  ನಿರ್ಬಂಧ ವಿಧಿಸಲಾಗಿದೆ.

ಜಲಾಶಯದಿಂದ ನೀರನ್ನ ಹೊರಬಿಟ್ಟ ಹಿನ್ನೆಲೆ ತಲಕಾಡಿನ ಸುತ್ತಮುತ್ತ ಪ್ರವಾಹದ ಭೀತಿ ಎದುರಾಗಿದ್ದು ಹೀಗಾಗಿ  ತಲಕಾಡಿನ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಅಂಗಡಿ ಮುಂಗಟ್ಟು ವ್ಯಾಪಾರಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದ್ದು,  ನದಿಯ ಬಳಿ ಪ್ರವಾಸಿಗರು,ಗ್ರಾಮಸ್ಥರು ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.

ಸದ್ಯ ಕಾವೇರಿ ನಿಸರ್ಗಧಾಮದ ಗೇಟ್ ಬಳಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಕಾವೇರಿ ನಿಸರ್ಗಧಾಮದಲ್ಲಿ ಖಾಕಿ ಫುಲ್ ಅಲರ್ಟ್ ಆಗಿದೆ.

Key words: KRS- water- Kabini Reservoir- Tourists- restricted –talakadu- Nature Reserve.