ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 220 ಕೋಟಿ ರೂ. ನೀರಿನ ಶುಲ್ಕ ಬಾಕಿ- ಮೇಯರ್ ಸುನಂದಾ ಪಾಲನೇತ್ರ.

ಮೈಸೂರು,ಜುಲೈ,12,2022(www.justkannada.in): ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 220 ಕೋಟಿ ರೂ. ನೀರಿನ ಶುಲ್ಕ ಬಾಕಿ ಇದೆ ಎಂದು ಮೇಯರ್ ಸುನಂದಾ ಪಾಲನೇತ್ರ ತಿಳಿಸಿದರು.

ಮೈಸೂರು ಪಾಲಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೇಯರ್ ಸುನಂದಾ ಪಾಲನೇತ್ರ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಒಟ್ಟು 1 ಲಕ್ಷ 80 ಸಾವಿರ ಸಂಪರ್ಕಗಳಿವೆ. ಈ ಪೈಕಿ 52 ಸಾವಿರ ಸಂಪರ್ಕಗಳಿಂದ ಒಟ್ಟಾರೆ 220 ಕೋಟಿ ನೀರಿನ ಶುಲ್ಕದ ಬಾಕಿ ಮೊತ್ತ ಹಲವಾರು ವರ್ಷಗಳಿಂದ ಪಾವತಿಯಾಗದೇ ಬಾಕಿಯಿದೆ. ಇದರಲ್ಲಿ 146 ಕೋಟಿ ಅಸಲು ಮೊತ್ತವಾದರೆ, 74 ಕೋಟಿ ಬಡ್ಡಿಯ ಅಂಶವಾಗಿದೆ. ಬಡ್ಡಿಯ ಮೊತ್ತವನ್ನು ಮನ್ನಾ ಮಾಡಲು ನಗರಪಾಲಿಕೆಗೆ ಅಧಿಕಾರವಿಲ್ಲ. ಹಾಗಾಗಿ ಬಡ್ಡಿ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಕಳೆದ ಏಪ್ರಿಲ್ 29 ರಂದು ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಜನರಿಗೆ ಹೆಚ್ಚಿನ ಹೊರೆ ಆಗುವುದನ್ನು ತಪ್ಪಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನಗರಪಾಲಿಕೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಡುವ ಹಿತದೃಷ್ಟಿಯಿಂದ ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವ ಬಳಕೆದಾರರು ಒಂದೇ ಬಾರಿ ಹಳೆಯ ಬಾಕಿ ಅಸಲು ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದಲ್ಲಿ ಅಂತಹ ಬಳಕೆದಾರರ ಹಿಂದಿನ ಬಡ್ಡಿ ಅಂಶವನ್ನು ಒಂದು ಬಾರಿ ಮಾತ್ರ ನಿಶ್ಚಲಗೊಳಿಸಲಾಗುವ ಬಡ್ಡಿ ನಿಶ್ಚಲತೆ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ‌. ಜುಲೈ 15 ರಿಂದ ಯೋಜನೆ ಜಾರಿಯಾಗುತ್ತಿದ್ದು, ಆರು ತಿಂಗಳ ಕಾಲ ಚಾಲ್ತಿಯಲ್ಲಿರಲಿದೆ. ನೀರಿನ ಬಳಕೆದಾರರು ಇದರ ಸದುಪಯೋಗ ಪಡಿಸಿಕೊಂಡು ಬಾಕಿ ಉಳಿಸಿಕೊಂಡಿರುವ ಮೊತ್ತ ಪಾವತಿಸಬೇಕು ಎಂದು ಮೇಯರ್ ಸುನಂದಾ ಪಾಲನೇತ್ರ ಹೇಳಿದರು.

Key words: mysore-city-corporation-220 crore -water -charges –pending- Mayor-Sunanda Palanetra.

ENGLISH SUMMARY…

A whopping Rs. 220 crore water bills due in MCC limits: Mayor Sunanda Phalanetra
Mysuru, July 12, 2022 (www.justkannada.in): Mysuru Mayor Sunanda Phalanetra today informed that the pending water bills in the Mysuru City Corporation is Rs. 220 crore!
Addressing a press meet at the MCC today, she informed that there are a total number of 1.80 lakh water connections in the MCC limits, out of which 52,000 connections owe a whopping Rs. 220 crore, which is pending from several years. While the principal bill amount is Rs. 146 crore, the interest amount is Rs. 74 crore. “The MCC doesn’t have the authority to waive off the interest amount. Hence, the State Govt. has been appealed to waive it off. This decision was taken in the MCC Council meeting held on April 29, in order to prevent additional burden to the citizens,” she added.
Keywords: Mysuru/ MCC/ Water bills/ Rs. 220 crore/ Mayor