ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ, 300 ಕೋಟಿ ರೂ. ಭ್ರಷ್ಟಾಚಾರ- ಶಾಸಕ ಪ್ರಿಯಾಂಕ್ ಖರ್ಗೆ ಆರೋಪ.

Promotion

ಕಲ್ಬುರ್ಗಿ,ಆಗಸ್ಟ್,12,2022(www.justkannada.in):  ಇತ್ತೀಚೆಗೆ ನಡೆದ ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ.  ಗೋಕಾಕ್ ನ ಒಬ್ಬ ಯುವಕನನ್ನ ಬಂಧಿಸಲಾಗಿದೆ.  ಪರೀಕ್ಷೆಯಲ್ಲಿ 300 ಕೋಟಿ ಭ್ರಷ್ಟಾಚಾರ ನಡೆದಿದೆ.  ಇದು ಅಸಮರ್ಥ ಸರ್ಕಾರ.  ಎಲ್ಲಾ ನೇಮಕಾತಿ ಹಗರಣಗಳ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಎಸಿಬಿ ರಚನೆ ಆದೇಶ ಹೈಕೋರ್ಟ್ ರದ್ಧು ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ,  ಎಸಿಬಿ ರದ್ದಾಗಿದ್ದು ಸರ್ಕಾರದಿಂದಲ್ಲ, ಕೋರ್ಟ್ ನಿಂಧ. ಸಿದ್ದರಾಮಯ್ಯ ಕೋರ್ಟ್ ಆದೇಶ ಪಾಲಿಸುವುದಾಗಿ ತಿಳಿಸಿದ್ದಾರೆ ಎಂದರು.

Key words: KPTCL -recruitment -exam – 300 crore-Corruption-MLA -Priyank Kharge