ಕೆಪಿಜೆಪಿ ಕಾಂಗ್ರೆಸ್ ಜತೆ ವಿಲೀನವಾಗಿಲ್ಲ: ಸುಪ್ರೀಂನಲ್ಲಿ ನ್ಯಾಯ ಸಿಗುತ್ತೆ- ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಆರ್.ಶಂಕರ್ ವಿಶ್ವಾಸ…

ಬೆಂಗಳೂರು,ಆ,5,2019(www.justkannada.in): ಕೆಪಿಜೆಪಿ ಕಾಂಗ್ರೆಸ್ ಜತೆ ವಿಲೀನವಾಗಿಲ್ಲ. ನಾನು ಈಗಲೂ ಪಕ್ಷೇತರ ಶಾಸಕ. ಸುಪ್ರೀಂಕೋರ್ಟ್ ನಲ್ಲಿ ನಮಗೆ ಗ್ಯಾರಂಟಿ ನ್ಯಾಯ ಸಿಗುತ್ತದೆ ಎಂದು   ಅನರ್ಹ ಶಾಸಕ ಆರ್ ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಅನರ್ಹಶಾಸಕ ರಮೇಶ್ ಜಾರಕಿಹೊಳಿ‌ ಅವರನ್ನ ಭೇಟಿ ಮಾಡಿದ ಬಳಿಕ ಮಾತನಾಡಿದ ಅನರ್ಹ ಶಾಸಕ ಆರ್. ಶಂಕರ್ , ನಾನು ರಮೇಶಱ ಜಾರಕಿಹೊಳಿ ಜತೆ ಬಹಳ ದಿನದಿಂದ ಇದ್ದೇನೆ. ಕೆಪಿಜೆಪಿಯನ್ನ ಕಾಂಗ್ರೆಸ್ ಜತೆ ವಿಲೀನವಾಗಿಸಿಲ್ಲ. ಇದಕ್ಕೆ ಸ್ಪೀಕರ್ ಸಹ ನನಗೆ ಕ್ರಮಬದ್ಧವಾಗಿ ದಾಖಲೆ ಮತ್ತು ಮನವಿ ಕೊಡಿ ಅಂತ ಹೇಳಿದ್ದರು. ಆದ್ರೆ ನಾನು ದಾಖಲೆ ಕೊಡಲಿಲ್ಲ ಹೀಗಾಗಿ ನನ್ನನ್ನ ಅನರ್ಹ ಮಾಡಿದ್ದಾರೆ ಎಂದು ತಿಳಿಸಿದರು.

ಅನರ್ಹಮಾಡಿರುವುದನ್ನ ಸುಪ್ರೀಂ ಕೋರ್ಟ್ ಒಪ್ಪಲ್ಲ. ನನ್ನ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದಿಲ್ಲ. ನಾನೂ ಈಗಲೂ ಪಕ್ಷೇತರ ಶಾಸಕ ಸುಪ್ರೀಂಕೋರ್ಟ್ ನಲ್ಲಿ ನಮಗೆ ನ್ಯಾಯಸಿಗುವುದು ಗ್ಯಾರಂಟಿ ಎಂದು ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಹಾಗೆಯೇ ಸರ್ಕಾರದ ಜತೆ ಇರಬೇಕು ಅಂದುಕೊಂಡಿದ್ದವು. ಆದರೆ ಸರ್ಕಾರದಲ್ಲಿ ಆದ ಕೆಲ ಘಟನೆಗಳಿಂದ ಬೆಂಬಲ ವಾಪಸ್ ಪಡೆಯುವ ನಿರ್ಧಾರ ಮಾಡಬೇಕಾಯಿತು ಎಂದು  ಆರ್.ಶಂಕರ್ ತಿಳಿಸಿದರು.

Key words:  KPJP -not merged- with – Congress-  R. Shankar -Ramesh Jarakiholli -Visit.