ಕೈ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾದ ಕೆಪಿಸಿಸಿ ಅಧ್ಯಕ್ಷರ ಪತ್ನಿಯ ಫೇಸ್’ಬುಕ್ ಪೋಸ್ಟ್ !

Promotion

ಬೆಂಗಳೂರು, ಸೆಪ್ಟೆಂಬರ್ 30, 2019 (www.justkannada.in): ಕೆಪಿಸಿಸಿ ಸಭೆಯಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿ ಟೀನ್‌ ಫೇಸ್‌ಬುಕ್‌ ಪೋಸ್ಟ್ ಕಾಂಗ್ರೆಸ್‌’ನಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಹಳೆಯ ನಾಯಕರು ಯಾವುದೇ ಜಾಗವನ್ನು ಬಿಟ್ಟುಕೊಡದ ಕಾರಣ ಯುವ ನಾಯಕರಲ್ಲಿ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ. ಹಿರಿಯರ ಅನುಭವದಿಂದ ಪಕ್ಷವು ಲಾಭ ಪಡೆಯಬಹುದಾದರೂ, ಯುವ ಮತ್ತು ಕ್ರಿಯಾಶೀಲ ನಾಯಕರನ್ನು ಮುಂಚೂಣಿಗೆ ತರುವ ತುರ್ತು ಅವಶ್ಯಕತೆಯಿದೆ ಯುವ ನಾಯಕತ್ವವು ಕೇವಲ ಅನಗತ್ಯವಾಗಿರಬಾರದು ಎಂದು ಟೀನಾ ಅವರು ಬರೆದುಕೊಂಡಿದ್ದಾರೆ.

ಅವರಿಗೆ ತಮ್ಮದೇ ಆದ ಅಭಿಪ್ರಾಯವನ್ನು ಮಂಡಿಸುವುದಕ್ಕೆ ಅವಕಾಶ ನೀಡಬೇಕು ಅಂತ ಅವರು ಬರೆದುಕೊಂಡಿದ್ದಾರೆ.
ಇದು ವೈಯಕ್ತಿಕ ಅಭಿಪ್ರಾಯ. ಪಕ್ಷ ಅಥವಾ ಯಾರನ್ನೋ ಉದ್ದೇಶಿಸಿ ಬರೆದಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.