ಹಲ್ಲೆಗೆ ಮುಂದಾದ ಅತ್ಯಾಚಾರ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್…

Promotion

ಕೋಲಾರ,ಅ,11,2019(www.justkannada.in):  ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆ ಮರಿಸಿಕೊಂಡಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಅತ್ಯಾಚಾರ ಆರೋಪಿ ಕುಟ್ಟಿ ಎಂಬಾತನ ಮೇಲೆಯೇ ಪೊಲೀಸರು ಫೈರಿಂಗ್ ಮಾಡಿರುವುದು. ಕೆಜಿ.ಎಫ್ ತಾಲ್ಲೂಕಿನ ಯರನಾಗನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕುಟ್ಟಿ ಎಂಬಾತ 8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆಮರಿಸಿಕೊಂಡಿದ್ದನು.

ಆರೋಪಿಯನ್ನ ಬಂಧಿಸಲು  ರಾಬರ್ಟ್ ಸನ್ ಪೇಟೆ ಠಾಣೆಯ ಸಿಪಿಐ ಸೂರ್ಯಪ್ರಕಾಶ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗುತ್ತಿತ್ತು. ಈ ವೇಳೆ ಆರೋಪಿ ಕುಟ್ಟಿ ಪೊಲೀಸರ ಮೇಲೆಯೆ ಕಲ್ಲನ್ನ ತೂರಿ ಪರಾರಿಯಾಗಲು ಯತ್ನಿಸಿದನು. ಈ ವೇಳೆ ಸಿಪಿಐ ಸೂರ್ಯ ಪ್ರಕಾಶ್ ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ಆರೋಪಿ ಕುಟ್ಟಿ ಕಾಲು ಮತ್ತು ಕೈಗೆ ಗಾಯವಾಗಿದೆ.  ಈ ಕುರಿತು ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: kolar- rape –accused-: Firing – police