ಕೋಲಾರ: ಕಾಣೆಯಾಗಿದ್ದ ಅಮ್ಮ-ಮಗು ಶವವಾಗಿ ಪತ್ತೆ

Promotion

ಕೋಲಾರ, ಜನವರಿ 09, 2021 (www.justkannada.in): ನೀರಿಗೆ ಬಿದ್ದು ತಾಯಿ ಮಗು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಮಂಡ್ಯಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ತಾಯಿ ಮಂಜುಳಾ(24) ಹಾಗೂ ಶಾಲಿನಿ(2) ಮೃತರು.

ಎರಡು ದಿನದ ಹಿಂದೆ ಕಾಣಿಯಾಗಿದ್ದ ತಾಯಿ ಮಗು ಚೆಕ್ ಡ್ಯಾಂ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಪತಿ ರವಿ ವಿರುದ್ದ ಮಂಜುಳ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ. ರಾಯಲಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.