ಮುಂದಿನ ಸೀಸನ್’ನಲ್ಲೂ ಆರ್’ಸಿಬಿಗೆ ಕೊಹ್ಲಿಯೇ ಕ್ಯಾಪ್ಟನ್

Promotion

ಬೆಂಗಳೂರು, ಸೆಪ್ಟೆಂಬರ್ 20, 2019 (www.justkannada.in): ಮುಂದಿನ ಸೀಜನ್ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲೂ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ನಾಯಕತ್ವದಲ್ಲಿ ಯಾವುದೇ ಬದಲಾ ವಣೆಗಳಿಲ್ಲ.

ಮುಂದಿನ ಋತುವಿನಲ್ಲೂ ಕೊಹ್ಲಿಯೇ ಮುಂದುವರಿಯಲಿದ್ದಾರೆ ಎಂದು ತಂಡದ ನಿರ್ದೇಶಕ ಮೈಕ್‌ ಹೆಸನ್‌ ಹೇಳಿದ್ದಾರೆ.

ವಿರಾಟ್‌ ಕೊಹ್ಲಿ, ಎಬಿ ಡಿ ವಿಲಿಯರ್. ಕ್ರಿಸ್‌ ಗೇಲ್‌ ಅವರಂತಹ ಬಲಿಷ್ಠ ಆಟಗಾರರನ್ನು ಹೊಂದಿದ್ದರೂ ಆರ್‌ಸಿಬಿ ಒಮ್ಮೆಯೂ ಕಪ್‌ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ.

ಕೊಹ್ಲಿ 7 ಸೀಸನ್‌ನಲ್ಲಿ ನಾಯಕತ್ವ ವಹಿಸಿದರೂ ತಂಡ ಚಾಂಪಿಯನ್‌ ಆಗಿಲ್ಲ. ಹೀಗಾಗಿ ಅವರನ್ನು ನಾಯತ್ವದಿಂದ ಕೆಳಗಿಳಿಸುವುದೇ ಸೂಕ್ತ ಎನ್ನುವ ಕೂಗು ಅಲ್ಲಲ್ಲಿ ಕೇಳಿಬಂದಿತ್ತು. ಆದರೆ ಇದಕ್ಕೀಗ ಹೆಸನ್‌ ತೆರೆ ಎಳೆದಿದ್ದಾರೆ.