ಕೊಡಗು: ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಸೆರೆ‌

Promotion

ಕೊಡಗು, ಮೇ 20, 2020 (www.justkannada.in): ಜನರ ನಿದ್ದೆಗೆಡಿಸಿದ್ದ ಹುಲಿ ಕೊನೆಗೂ ಸೆರೆ‌ಯಾಗಿದೆ. ಜಾನುವಾರು ಭಕ್ಷಕ ಹುಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ‌ 24 ಹಸುಗಳನ್ನ ಕೊಂದಿದ್ದ 8 ವರ್ಷದ ಗಂಡು ಹುಲಿ ಸೆರೆಯಾಗಿದೆ. ಮೂರು ದಿನಗಳಿಂದ 40 ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ‌‌ ನಡೆಸಲಾಗಿತ್ತು.

ವಿರಾಜಪೇಟೆ ತಾಲೂಕಿನ ಬೆಳ್ಳೂರು  ದಿನೇಶ್ ತೋಟದಲ್ಲಿ ಸೆರೆ ಹಿಡಿಯಲಾಗಿದೆ. ಡೆಹ್ರಾಡೂನ್ ನ ತಜ್ಞ ವೈದ್ಯ ಸನತ್ ಕೃಷ್ಣ ಮುಳಿಯ ನೇತೃತ್ವ ಟೀಂ ನಿಂದ ಕಾರ್ಯಚರಣೆ ನಡೆಸಲಾಗಿತ್ತು.

ಹುಲಿ ಸೆರೆ ಕಾರ್ಯಾಚರಣೆಗೆ ಮತ್ತಿಗೂಡು ಅರಣ್ಯ ವಲಯದ ಗೋಪಾಲಸ್ವಾಮಿ,ಭೀಮಾ, ಗಣೇಶ ಆನೆಗಳ ತಂಡ ಪಾಲ್ಗೊಂಡಿದ್ದರು. ಸೆರೆಸಿಕ್ಕ ಹುಲಿ ಮೈಸೂರು ಕೂರ್ಗಳ್ಳಿ ಪ್ರಾಣಿ ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ. ಪಶುವೈದ್ಯ ಮುಜೀಬ್ ರೆಹಮಾನ್, ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ತೀರ್ಥ, ರಂಜನ್ ದೇವಯ್ಯ ಸೇರಿ ಅರಣ್ಯ ಇಲಾಖೆ ಸಿಬ್ಬಂದಿ ಸಾಥ್ ನೀಡಿದ್ದರು.