ಮೈಸೂರಿನ ಕೊರೊನಾ ಸೋಂಕಿತನ ಆರೋಗ್ಯ ಸ್ಥಿರ: ಜನರ ಆತಂಕಕ್ಕೀಡಾಗುವ ಅಗತ್ಯವಿಲ್ಲ ಎಂದ ಡಿಎಚ್’ಒ ಡಾ.ವೆಂಕಟೇಶ್

ಮೈಸೂರು, ಮೇ 20, 2020 (www.justkannada.in): ಮೈಸೂರಿನಲ್ಲಿದ್ದ ಎಲ್ಲಾ ಕಾರ್ಮಿಕರನ್ನು ಸುರಕ್ಷಿತವಾಗಿ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಂಡು ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸಿಕೊಡಲಾಗುವುದು ಎಂದು ಡಿಎಚ್ಓ ಡಾ. ವೆಂಕಟೇಶ್  ತಿಳಿಸಿದ್ದಾರೆ.

ಪ್ರಯಾಣದ ಸಂದರ್ಭದಲ್ಲಿ ತೊಂದರೆಯಾದರೆ ಹತ್ತಿರದ ಸರ್ಕಾರಿ ಆಸ್ಪತ್ರೆ ಗೆ ಕರೆದುಕೊಂಡು ಹೋಗುವಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಸೂಚನೆ ನೀಡಿದ್ದೇನೆ. ಮೈಸೂರಿನಲ್ಲಿ ಈಗಿರುವ ಪಾಸಿಟಿವ್ ಪ್ರಕರಣದ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ. ಮತ್ತಷ್ಟು ಪಾಸಿಟಿವ್ ಪ್ರಕರಣಗಳು ಬಂದರೂ ಬರಬಹುದು ಎಂದು ಹೇಳಿದ್ದಾರೆ.

ಆದರೂ ಮೈಸೂರಿನ ಜನತೆ ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಡಿಎಚ್ಓ ಡಾ. ವೆಂಕಟೇಶ್  ಮಾಹಿತಿ ನೀಡಿದ್ದಾರೆ.