“ಜ್ಞಾನಬುತ್ತಿ ಸಂಸ್ಥೆ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

kannada t-shirts

ಮೈಸೂರು,ಮಾರ್ಚ್,05,2021(www.justkannada.in) : ವಿಶ್ವವಿದ್ಯಾನಿಲಯ ಪದವಿ ಕೊಡುವುದು ಒಂದು ಭಾಗ, ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವುದು ಮತ್ತೊಂದು ಭಾಗ. ಈ ನಿಟ್ಟಿನಲ್ಲಿ ಜ್ಞಾನಬುತ್ತಿ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

jkಮೈಸೂರು ವಿಶ್ವವಿದ್ಯಾನಿಲಯದ ಪೆವಿಲಿಯನ್ ಮೈದಾನದಲ್ಲಿ ಜ್ಞಾನಬುತ್ತಿ ಸಂಸ್ಥೆ ಏರ್ಪಡಿಸಿದ್ದ ಪಿಎಸ್ಐ ದೈಹಿಕ ಪರೀಕ್ಷೆಗೆ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರತಿವರ್ಷ 3000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ 1000 ಜನಕ್ಕಾದರೂ ಉದ್ಯೋಗ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಮಹತ್ವದ ಯೋಜನೆ ಕೆರಿಯರ್ ಹಬ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು ಪದವಿ ಕೊಡುವುದು ಒಂದು ಭಾಗವಾದರೆ,  ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವುದು ಮತ್ತೊಂದು ಭಾಗ. ಈ ನಿಟ್ಟಿನಲ್ಲಿ ಜ್ಞಾನಬುತ್ತಿ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ತರಬೇತಿ ಸಂಯೋಜನಾಧಿಕಾರಿ ಡಾ.ಎಸ್ ಬಿ ಎಂ ಪ್ರಸನ್ನ ಮಾತನಾಡಿ, ಸರ್ಕಾರ ಪಿಎಸ್ ಐ ದೈಹಿಕ ಪರೀಕ್ಷೆಗೆ ದಿನಾಂಕ ನಿಗಧಿಪಡಿಸಿದ್ದು, ವಿದ್ಯಾರ್ಥಿಗಳಲ್ಲಿ ಆಶಾ ಭಾವನೆ ಮೂಡಿಸಿದೆ. ಲಿಖಿತ ಪರೀಕ್ಷೆಗೆ ಫೆಬ್ರವರಿ 15ರಿಂದ ಜ್ಞಾನಬುತ್ತಿ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

knowledgeable-organization-Without-reward-society-Service-Submitting-Chancellor-Prof.G.Hemant Kumar

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಹಿಂದಿನ ನಿರ್ದೇಶಕ ಡಾ.ಸಿ.ಕೃಷ್ಣ, ಜ್ಞಾನಬುತ್ತಿ ಕಾರ್ಯದರ್ಶಿ ಎಚ್.ಬಾಲಕೃಷ್ಣ,  ಜೈನಹಳ್ಳಿ ಸತ್ಯನಾರಾಯಣಗೌಡ, ತರಬೇತಿ ನೀಡಲಿರುವ ಕೋಚ್ ಪುನೀತ್ ಹಾಜರಿದ್ದರು.

ENGLISH SUMMARY…

“Jnanabutti is rendering selfless service’: MoU VC
Mysuru, Mar. 05, 2021 (www.justkannada.in): “While one division of the University provides graduation to the students, another division prepares them for employment. The Jnanabutti is rendering selfless service to the society,” opined Prof. G. Hemanth Kumar, Vice-Chancellor, University of Mysore.
He inaugurated the free training camp for the candidates who are aspiring to appear for the PSI examinations, organized by the Jnanabutti, held at the Pavilion Grounds, in the University of Mysore.
“Three thousand students will pursue an education at the University of Mysore every year. Career Hub is a significant program that has been organized to help at least 1000 students to get job opportunities. Jnanabutti is rendering selfless service in this regard to the society,” he said.knowledgeable-organization-Without-reward-society-Service-Submitting-Chancellor-Prof.G.Hemant Kumar
On the occasion, Dr. S.B.M. Prasanna, Training Coordinator, informed that the date of the PSI physical examination is announced and has triggered enthusiasm and hope among the students. Jnanabutti is providing training for this exam from February 15.
Keywords: Jnanabutti/ University of Mysore/ Prof. G. Hemanth Kumar/ selfless service

key words : knowledgeable-organization-Without-reward-society-Service-Submitting-Chancellor-Prof.G.Hemant Kumar

website developers in mysore