ಎವೈ.4.2 ಡೆಲ್ಟಾ ರೂಪಾಂತರಿ ಕೋವಿಡ್ ತಳಿ ಕುರಿತು ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ.

kannada t-shirts

ಬೆಂಗಳೂರು, ಅಕ್ಟೋಬರ್ 28, 2021 (www.justkannada.in): ಕೋವಿಡ್-19 ಮಹಾಮಾರಿಯಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ದೊರೆಯಿತು ಎಂದುಕೊಳ್ಳುವಷ್ಟರಲ್ಲೇ ಅದರ ಹೊಸ ರೂಪಾಂತರಿ ತಳಿಯೊಂದು ಜಗತ್ತಿನಾದ್ಯಂತ ಅನೇಕ ರಾಷ್ಟ್ರಗಳಿಗೆ ಪುನಃ ಭಯವನ್ನು ಹುಟ್ಟುಹಾಕಿದೆ.

ಡೆಲ್ಟಾ ರೂಪಾಂತರಿಯ ಉಪ ತಳಿಯಾಗಿರುವ ಎವೈ.೪.೨ ರೂಪಾಂತರಿ ತಳಿಯ ಪ್ರಕರಣಗಳು ವಿಶ್ವದ ಹಲವು ರಾಷ್ಟ್ರಗಳಲ್ಲಿ ವರದಿಯಾಗಿದ್ದು, ಇದು ಹಳೆಯ ತಳಿಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತವೆ, ಆದರೆ ಅಷ್ಟು ಅಪಾಯಕಾರಿ ಅಲ್ಲ ಎನ್ನಲಾಗಿದೆ.

ಎನ್‌ಡಿಟಿವಿ ವರದಿಯೊಂದರ ಪ್ರಕಾರ, ಯುಕೆ ಹೆಲ್ತ್ ಸೆಕ್ಯೂರಿಟಿ ಏಜೆನ್ಸಿ (ಯುಕೆಹೆಚ್‌ಎಸ್‌ಎ) ಇತ್ತೀಚಿನ ತಿಂಗಳುಗಳಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಎವೈ.೪.೨ ರೂಪಾಂತರಿ ತಳಿ ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ತಿಳಿಸಿದೆಯಂತೆ.

ಯುಕೆಎಸ್‌ಹೆಚ್‌ಎ ಪ್ರಕಾರ, “ಡೆಲ್ಟಾ ತಳಿಯ ಹೋಲಿಕೆಯಲ್ಲಿ ಈ ಹೊಸ ರೂಪಾಂತರಿ ಹೆಚ್ಚಾಗಿರುವ ಸಾಕ್ಷಿಗಳು ಲಭಿಸಿವೆ. ಆದರೆ, ಈ ತಳಿಯಲ್ಲಾಗುವ ಬದಲಾವಣೆಗಳಿಂದಾಗಿ ಈ ತಳಿ ಉಂಟು ಮಾಡುವ ಅಪಾಯಗಳ ಕುರಿತು ಇನ್ನೂ ಹೆಚ್ಚಿನ ಸಾಕ್ಷ್ಯಗಳನ್ನು ಪತ್ತೆ ಹಚ್ಚಬೇಕಾಗಿದೆ,” ಎಂದು ತಿಳಿಸಿದೆ.

ಎವೈ.೪.೨ ರೂಪಾಂತರಿ ತಳಿ ಎಂದರೇನು?

ಇದು ಕೋವಿಡ್-೧೯ ಡೆಲ್ಟಾ ರೂಪಾಂತರಿಯ ಉಪತಳಿಯಾಗಿದೆ. ಬಿ.೧.೬೧೭.೨ ಎಂದೂ ಗುರುತಿಸಲ್ಪಡುವ ಡೆಲ್ಟಾ ರೂಪಾಂತರಿ ಭಾರತದಲ್ಲಿ ಮೊದಲ ಬಾರಿಗೆ ಅಕ್ಟೋಬರ್ ೨೦೨೦ರಲ್ಲಿ ಕಂಡು ಬಂತು. ಈ ಎವೈ.೪.೨ ಉಪತಳಿ ತನ್ನ ಸ್ಕ್ರೇಕ್ ಪ್ರೋಟಿನ್‌ನಲ್ಲಿ ಎ೨೨೨ವಿ ಹಾಗೂ ವೈ೧೪೫ಹೆಚ್ ಎಂಬ ಎರಡೂ ರೀತಿಯ ರೂಪಾಂತರಗಳನ್ನು ಹೊಂದಿದೆ. ವರದಿಯ ಪ್ರಕಾರ, ಯುಕೆಹೆಚ್‌ ಎಸ್‌ ಎ ಡೆಲ್ಟಾ ಉಪವಂಶಾವಳಿ ಎವೈ.೪ ಗೆ ವಿಯುಐ-೨೧ಅಕ್ಟೋಬರ್-೦೧ ಎಂಬ ಅಧಿಕೃತ ಹೆಸರನ್ನು ನೀಡಿದೆ.

ಯಾವ ರಾಷ್ಟ್ರಗಳಲ್ಲಿ ಎವೈ.೪.೨ ರೂಪಾಂತರಿ ತಳಿ ವರದಿಯಾಗಿವೆ:

ಯುನೈಟೆಡ್ ಕಿಂಗ್‌ಡಂನಲ್ಲಿ ಎವೈ.೪.೨ನ ೯೬% ಪ್ರಕರಣಗಳು ವರದಿಯಾಗಿದ್ದರೆ, ಡೆನ್ಮಾರ್ಕ್ ಹಾಗೂ ಜರ್ಮನಿಯಲ್ಲಿ ತಲಾ ಶೇ.೧ ವರದಿಯಾಗಿದೆ. ಈ ಹೊಸ ರೂಪಾಂತರಿ ಯುಎಸ್, ಇಸ್ರೇಲ್ ಹಾಗೂ ರಷ್ಯಾಗಳಲ್ಲಿಯೂ ಕಂಡು ಬಂದಿದೆ.

ಇಸ್ರೇಸಲ್ ಸಹ ಅಕ್ಟೋಬರ್ ೧೯ರಂದು ಎವೈ.೪.೨ ರೂಪಾಂತರಿಯ ಅಸ್ತಿತ್ವವನ್ನು ಖಾತ್ರಿಪಡಿಸಿದೆ. ಯೂರೋಪ್‌ನಿಂದ ಇಸ್ರೇಲ್‌ಗೆ ಬಂದಂತಹ ೧೧-ವರ್ಷ ವಯಸ್ಸಿನ ಓರ್ವ ಬಾಲಕನ ಮೂಲಕ ಹರಡಿದೆ ಎಂದಿದೆ. ಅದೇ ರೀತಿ, ರಷ್ಯಾ ಸಹ ಡೆಲ್ಟಾ ಉಪರೂಪಾಂತರಿಯ ಪ್ರತ್ಯೇಕ ಪ್ರಕರಣಗಳ ಕುರಿತು ವರದಿ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಎವೈ.೪.೨ ಅಪಾಯಕಾರಿಯೇ?

ಯುಕೆಹೆಚ್‌ಎಸ್‌ ಎ ಪ್ರಕಾರ ಎವೈ.೪.೨ ಕುರಿತ ಸಾಕ್ಷ್ಯಾಧಾರ ಇನ್ನೂ ಹೊರಗೆ ಬರಬೇಕಿದೆ. ಸದ್ಯಕ್ಕೆ ಈ ರೂಪಾಂತರಿ ಗಂಭೀರ ಸ್ವರೂಪದ ಖಾಯಿಲೆಗಳನ್ನು ಉಂಟು ಮಾಡುವುದಿಲ್ಲ ಎನ್ನಲಾಗಿದೆ. ಈಗ ನೀಡುತ್ತಿರುವ ಲಸಿಕೆಗಳು ಈ ಉಪವಂಶಾವಳಿಯ ಮೇಲೆ ಪ್ರಭಾವ ಬೀರಬಲ್ಲದು ಎನ್ನಲಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: know -about – AY.4.2 Delta- Mutant- covid breed

website developers in mysore