ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಸೇರಿ ಮೂವರಿಗೆ ಜಾಮೀನು ಮಂಜೂರು.

ಮುಂಬೈ,ಅಕ್ಟೋಬರ್,28,2021(www.justkannada.in):  ಡ್ರಗ್ಸ್‌ ಪ್ರಕರಣಕ್ಕೆ ಸಂಬಂದಪಟ್ಟಂತೆ ಬಂಧಿತನಾಗಿ ಜೈಲುವಾಸ ಅನುಭವಿಸುತ್ತಿರುವ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕೊನೆಗೂ ಬಿಡುಗಡೆ  ಭಾಗ್ಯ ಸಿಕ್ಕಿದೆ.

ಆರ್ಯನ್ ಖಾನ್ ಸೇರಿ ಮೂವರಿಗೆ ಮುಂಬೈ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಾಂಗ ಬಂಧನದಲ್ಲಿರುವ  ಆರ್ಯನ್‌ ಸೇರಿದಂತೆ ಮೂವರ ಜಾಮೀನು ಅರ್ಜಿ ವಿಚಾರಣೆ  ಮುಂಬೈ ಕೋರ್ಟ್ ನಲ್ಲಿ ನಡೆಯಿತು.

ಇದೀಗ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜಾಮೀನು  ಮಂಜೂರಾಗಿದ್ದು ನಾಳೆ ಷರತ್ತುಗಳ ಬಗ್ಗೆ ಕೋರ್ಟ್ ಆದೇಶಿಸಲಿದೆ. ಈ ಹಿನ್ನೆಲೆ ನಾಳೆ ಅಥವಾ ನಾಡಿದ್ದು ಆರ್ಯನ್ ಖಾನ್ ಗೆ ಬಿಡುಗಡೆ ಭಾಗ್ಯ ಸಿಗಲಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 3 ರಂದು ಆರ್ಯನ್ ಖಾನ್ ಸೇರಿ ಮೂವರ ಬಂಧನವಾಗಿದ್ದು ನ್ಯಾಯಾಂಗ್ ಬಂಧನದಲ್ಲಿದ್ದರು.

Key words: actor -Shah Rukh Khan – son -Aryan –court-granted -bail