ಕುತೂಹಲವನ್ನು ಇಮ್ಮಡಿಗೊಳಿಸಿದೆ ಕೆಜಿಎಫ್ ಮಿಸ್ಟರಿ ಮ್ಯಾನ್ ಅಧೀರನ ಪಾತ್ರ

Promotion

ಬೆಂಗಳೂರು:ಜುಲೈ-28:(www.justkannada.in) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರ ಆರಂಭದಿಂದಲೂ ಹಲವಾರು ಕುತೂಹಲಗಳನ್ನು ಹುಟ್ಟುಹಾಕಿತ್ತಲೇ ಇದೆ. ಅದರಲ್ಲೂ ಕೆಜಿಎಫ್ ಚಾಪ್ಟರ್ 2ರಲ್ಲಿ ಬಾಲಿವುಡ್ ನ ಹಲವಾರು ಕಲಾವಿದರು ಇರಲಿದ್ದಾರೆ ಎಂಬುದು ಈ ಕುತೂಹಲ ಇಮ್ಮಡಿಗೊಳ್ಳುವಂತಾಗಿದೆ. ಬಾಲಿವುಡ್ ನ ಯಾವ ನಟ-ನಟಿಯರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕೂತೂಹಲದ ಜತೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ನಡುವೆ ಜು.26 ಒಂದು ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಕೆಜಿಎಫ್ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲಂಸ್’ ಘೋಷಿಸಿತ್ತು. ಅದಕ್ಕಾಗಿ ಕಾದು ಕುಳಿತಿದ್ದ ಸಿನಿಪ್ರಿಯರಿಗೆ ಸಿಕ್ಕಿದ್ದು ಒಂದು ಖಡಕ್ ಪೋಸ್ಟರ್. ಸಿಂಹದ ಮುಖ ಇರುವ ಉಂಗುರ ಧರಿಸಿ, ಹಿಂಬದಿಯಲ್ಲಿ ಕೈ ಕಟ್ಟಿ ನಿಂತಿರುವ ಅಧೀರನ ಪೋಸ್ಟರ್ ಬಿಡಿಗಡೆಮಾಡಿತ್ತು. ಇದರ ಜತೆಗೆ ಜುಲೈ 29ಕ್ಕೆ ಚಿತ್ರದ ಪ್ರಮುಖ ಪಾತ್ರಧಾರಿ ಅಧೀರನ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿದೆ. ಕೆಜಿ ಎಫ್ ಮೊದಲ ಭಾಗದಲ್ಲಿ ಕೆಲ ಕ್ಷಣ ಮಾತ್ರ ಬಂದು ಹೋಗುವ ಖಳನಾಯಕ ಸೂರ್ಯವರ್ಧನ್ ನ ಸಹೋದರನಾಗಿರುವ ಅಧೀರ ಯಾರೆಂಬುದಿ ಗೊತ್ತಾಗಿಲ್ಲ. ಕಾರಣ ಅದರಲ್ಲಿ ಆತನ ಮುಖವನ್ನು ತೋರಿಸಿಲ್ಲ. ಹೀಗಾಗಿ ಕೆಜಿಎಫ್-2 ನಲ್ಲಿ ಅಧೀರನನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಯಾರಿರಬಹುದು ಎಂಬ ಕುತೂಹಲದ ಜತೆಗೆ ಕೆಲ ಊಹಾಪೋಹಗಳು ನಡೆಯುತ್ತಿದೆ.

ಈ ನಡಿವೆ ಬಾಲಿವುಡ್ ನಟ ಸಂಜಯ್ ದತ್ ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಕೆಜಿಎಫ್-2ನಲ್ಲಿ ಸಂಜಯ್ ದತ್ ಪ್ರಮುಖ ಪಾತ್ರವೊಂದರಲ್ಲಿ ಅಬ್ಬರಿಸಲಿದ್ದಾರೆ ಎಂದು ತಿಳಿದುಬಂದಿದ್ದು, ಈಗ ಚಿತ್ರತಂಡ ಜುಲೈ.29ಕ್ಕೆ ಅಧೀರ ಯಾರೆಂಬುದನ್ನು ಬಹಿರಂಗಪಡಿಸುವುದಾಗಿ ಹೇಳಿದೆ. ಈ ಹಿನ್ನಲೆಯಲ್ಲಿ ಅಧೀರನ ಪಾತ್ರದಲ್ಲಿ ಸಂಜಯ್ ದತ್ ಇರಬಹುದು ಎನ್ನಲಾಗಿದೆ. ಇದಕ್ಕೆ ಬಲವಾದ ಇನ್ನೊಂದು ಕಾರಣ ಜುಲೈ.29ರಂದು ಸಂಜಯ್ ದತ್ ಹುಟ್ಟುಹಬ್ಬ. ಹೀಗಾಗಿ ಅಂದೇ ಅಧೀರನ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಂಜಯ್ ದತ್ ಗೆ ಬರ್ತ್ ಡೇ ಗಿಫ್ಟ್ ನೀಡಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಈ ಕುತೂಹಲಗಳಿಗೆ, ಊಹಾಪೋಹಗಳಿಗೆ ತೆರೆ ಬೀಳಲಿದ್ದು, ಅಲ್ಲಿಯವರೆಗೆ ಕಾಯಲೇಬೇಕು.

ಕುತೂಹಲವನ್ನು ಇಮ್ಮಡಿಗೊಳಿಸಿದೆ ಕೆಜಿಎಫ್ ಮಿಸ್ಟರಿ ಮ್ಯಾನ್ ಅಧೀರನ ಪಾತ್ರ
KGF’s Mystery Man, No Surprise!