‘ರೆಬೆಲ್’ ಶಾಸಕರಿಗೆ ‘ಅನರ್ಹತೆ’ ಚಡಿ ಏಟು ನೀಡಿದ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು, ಜುಲೈ 28,2019(www.justkannada.in): ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 14 ಮಂದಿಯ ಅನರ್ಹ ಮಾಡಲಾಗಿದೆ ಅಂತ ಹಂಗಾಮಿ ಸ್ಪೀಕರ್‌ ರಮೇಶ್‌ ಕುಮಾರ್‌ ಇಂದು ಘೋಷಿಸಿದರು.

ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದರು. ಪ್ರತಾಪ್‌ ಗೌಡ. ಪಾಟೀಲ್‌ ಬಿಸಿ ಪಾಟೀಲ್‌, ಶಿವರಾಮ್‌ ಹೆಬ್ಬಾರ್‌. ಎಸ್‌.ಟಿ ಸೋಮಶೇಖರ್‌. ಭೈರತಿ ಬಸವಾರಾಜ್‌, ಆನಂದ್‌ ಸಿಂಗ್‌. ಆರ್‌. ರೋಷನ್‌ ಬೇಗ್‌. ಮುನಿರತ್ನ, ಡಾ.ಕೆ ಸುಧಾಕರ್‌. ಎಂ.ಟಿ.ಬಿ ನಾಗರಾಜ್‌. ಹೆಚ್. ವಿಶ್ವನಾರ್‌. ಕೆ.ಸಿ ನಾರಾಯಣ ಗೌಡ, ಕೆ.ಗೋಪಾಲಯ್ಯ ಅವರನ್ನು ಅನರ್ಹ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯಪಾಲರು ಬಿಎಸ್‌ ಯಡಿಯೂರಪ್ಪನವರಿಗೆ ಸಿಎಂ ಆಗುವುದಕ್ಕೆ ಅವಕಾಶ ನೀಡಿದ್ದಾರೆ ಅಂತ ಹೇಳಿದರು. ತಾವು ಅಧಿಕಾರ ಸ್ವೀಕಾರ ಮಾಡಿದ ವೇಳೆ ಬಿಎಸ್‌ವೈ ನನ್ನ ಭೇಟಿ ಮಾಡಿ ನಾನು ಭೇಟಿ ಮಾಡಿ ಸೋಮವಾರ ನಡೆಯಲಿರುವ ಅಧಿವೇಶನವನ್ನು ನಡೆಸುವುದಕ್ಕೆ ಅವಕಾಶ ಮಾಡಬೇಕಾಗಿ ಮನವಿ ಮಾಡಿಕೊಂಡರು ಎಂದು ಹೇಳಿದರು.