ನನ್ನ ಮತ್ತು ಹೆಚ್.ಡಿ ದೇವೇಗೌಡರ ಸಂಬಂಧ ಚೆನ್ನಾಗಿದೆ-ಕುತೂಹಲ ಮೂಡಿಸಿದ  ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

Promotion

ಹಾವೇರಿ,ನ,7,2019(www.justkannada.in):  ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ನನ್ನ ಸಂಬಂಧ ಚೆನ್ನಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಹಾವೇರಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿಎಂ ಬಿಎಸ್ ಯಡಿಯೂರಪ್ಪ ಮಾಧ್ಯಮಗ:ಳ ಜತೆ ಮಾತನಾಡಿ, ನನ್ನ ಮತ್ತು ದೇವೇಗೌಡರ ಸಂಬಂಧ ಚೆನ್ನಾಗಿದೆ. ಹೆಚ್ ಡಿ ದೇವೇಗೌಡರ ಭೇಟಿ ಬಗ್ಗೆ ಈಗ ಚರ್ಚೆ ಬೇಡ. ಅದಲ್ಲವನ್ನು ಮಾಧ್ಯಮಗಳ ಮುಂದೆ ಹೇಳಲು ಆಗಲ್ಲ. ಸೂಕ್ತ ಸಂದರ್ಭ ಬರಲಿ ತಿಳಿಸುತ್ತೇನೆ ಎಂದು ತಿಳಿಸಿದರು.

ಹಾಗೆಯೇ ಬಿಜೆಪಿಯಲ್ಲೇ ಸಿಎಂ ಬಿಎಸ್ ವೈ ಮುಗಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿದ ಸಿಎಂ ಬಿಎಸ್ ವೈ, ಸದ್ಯ ನನ್ನ ಬಗ್ಗೆ ಅಷ್ಟು ಚಿಂತಿಸುತ್ತಾರಲ್ಲಾ.. ವ್ಯಂಗ್ಯವಾಡಿದರು.

ಇತ್ತೀಚೆಗೆ ಜೆಡಿಎಸ್ ನಾಯಕರು ಬಿಜೆಪಿ ಬಗ್ಗೆ ಸಾಪ್ಟ್ ಕಾರ್ನರ್  ಹೊಂದಿದ್ದು, ನಿನ್ನೆಯಷ್ಟೆ ಮಾತನಾಡಿದ್ದ ಹೆಚ್.ಡಿ ದೇವೇಗೌಡರು ಸಿಎಂ ಬಿಎಸ್ ವೈ ನಮಗೇನು ಶತ್ರುಗಲಲ್ಲ ಎಂದಿದ್ದರು. ಇನ್ನು ಬಿಜೆಪಿ ಸರ್ಕಾರ ರಕ್ಷಣೆಗೆ ಹೆಚ್.ಡಿ ದೇವೇಗೌಡರು ಸಿಎಂ ಬಿಎಸ್ ವೈಗೆ ದೂರವಾಣಿ ಕರೆ ಮಾಡಿ ಅಭಯ ನೀಡಿದ್ದರು ಎಂಬ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೆ ಇದೀಗ ಸಿಎಂ ಬಿಎಸ್ ವೈ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.

Key  words: My relationship- with -HD Deve Gowda – good-CM BS Yeddyurappa