ಕೆಇಎ ಪರೀಕ್ಷೆ ಅಕ್ರಮ ಪ್ರಕರಣ : ಸಿಐಡಿ ತನಿಖೆಗೆ ಹಸ್ತಾಂತರ.

Promotion

ಬೆಂಗಳೂರು, ನವೆಂಬರ್,​​​​ 11,2023(www.justkannada.in):  ಕೆಇಎ ನಡೆಸಿದ ಎಫ್ ಡಿಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ತನಿಖೆಯನ್ನು ಗೃಹ ಇಲಾಖೆ ಸೂಚನೆ ಮೇರೆಗೆ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ.

ಈ ಸಂಬಂಧ ಯಾದಗಿರಿ ನಗರ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. ಗೃಹ ಇಲಾಖೆಯ ಸೂಚನೆ ಮೇರೆಗೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹೀತೇಂದ್ರ ಸಿಐಡಿ ತನಿಖಾಧಿಕಾರಿಗೆ ಪ್ರಕರಣದ ಕಡತಗಳನ್ನು ಹಸ್ತಾಂತರ ಮಾಡಿದ್ದಾರೆ.

ಕೆಇಎ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಕಿಂಗ್ ಪಿನ್  ​ ಆರ್​.ಡಿ ಪಾಟೀಲ್​ ನನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಆರ್ ಡಿ ಪಾಟೀಲ್ ನನ್ನು ಬಂಧಿಸಿದ್ದರು.

Key words: KEA exam- illegality- case – CID-Investigation