ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅದು ಅಧಿಕಾರ ಅಲ್ಲ, ಅದು ಜವಾಬ್ದಾರಿ- ಮಾಜಿ ಸಚಿವ ಸಿ.ಟಿ ರವಿ.

ಬೆಂಗಳೂರು,ನವೆಂಬರ್,11,2023(www.justkannada.in): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅದು ಅಧಿಕಾರ ಅಲ್ಲ, ಅದು ಜವಾಬ್ದಾರಿ. ನಾನು ಯಾವುದೇ ಹುದ್ದೆ ಆಕಾಂಕ್ಷೆ ಅಲ್ಲ ಅಂತಾ ಮೊದಲೇ ಹೇಳಿದ್ದೆ. ಯಾವುದೇ ಹುದ್ದೆ ಕೇಳೇ ಇಲ್ಲಾ ಅಂದಾಗ ಅಸಮಾಧಾನ ಬರುವುದಿಲ್ಲ  ಎಂದು ಮಾಜಿ ಸಚಿವ ಸಿ.ಟಿ ರವಿ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ ವಿಚಾರ ಕುರಿತು ಮಾತನಾಡಿದ ಸಿ.ಟಿ ರವಿ,  ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಈಗಾಗಲೇ ಅಭಿನಂದನೆ ಸಲ್ಲಿಸಿದ್ದೇನೆ. ನಾನು ಯಾವುದೇ ಹುದ್ದೆ ಆಕಾಂಕ್ಷೆ ಅಲ್ಲ ಅಂತಾ ಮೊದಲೇ ಹೇಳಿದ್ದೆ. ಪಕ್ಷದಲ್ಲಿ ನಾನು ಮೊದಲು ಬೂತ್ ಕಾರ್ಯಕರ್ತನಾಗಿದ್ದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಜವಾಬ್ದಾರಿ ಕೊಟ್ಟಿದೆ. ರಾಜ್ಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ನಾನು ಸಂಭ್ರಮದಲ್ಲಿದ್ದಾಗ ಯಾರನ್ನ ಮನಸ್ಸು ನೋಯಿಸುವುದಿಲ್ಲ. ನಾನು ಒಂದೇ ರೀತಿ ಯೋಚನೆ ಮಾಡುತ್ತೇನೆ. ಚೆಸ್ ಇಬ್ಬರು ಪ್ರತಿಸ್ಪರ್ಧಿಗಳ ನಡುವೆ ನಡೆಯುವುದು. ರಾಜಕಾರಣ ಫುಟ್ ಬಾಲ್ ರೀತಿ, ಎಲ್ಲರೂ ಟೀಮ್ ವರ್ಕ್ ಮಾಡಬೇಕು ಎಂದರು.

ಕುಟುಂಬ ರಾಜಕಾರಣ ಕುರಿತು ಪ್ರತಿಕ್ರಿಯಿಸಿದ ಸಿಟಿ ರವಿ, ನಾನು ಮಾತನಾಡಿದರೆ ಅದು ತಪ್ಪು ಅರ್ಥವಾಗುತ್ತದೆ. ಎಲ್ಲೆಲ್ಲಿಗೋ ಕನೆಕ್ಟ್​ ಆಗುತ್ತದೆ. ಹೀಗಾಗಿ ಉತ್ತರಿಸಲ್ಲ. ನಾನು ಪಕ್ಷದ ಕಟ್ಟಾಳು. ಪಕ್ಷದ ನಿರ್ಣಯದ ವಿರುದ್ಧ ಮಾತನಾಡಿಲ್ಲ. ನಿರ್ಣಯ ಸರಿಯಿಲ್ಲ ಎಂದು ಅನಿಸಿದರೆ ವೇದಿಕೆ ಇದೆ. ಆದರೆ ಪಕ್ಷ ನಿರ್ಣಯ ತೆಗೆದುಕೊಂಡಿದ್ದರಿಂದ ಯಾವುದೇ ಅಸಮಾಧಾನ ಇಲ್ಲ ಎಂದು ತಿಳಿಸಿದರು

Key words: BJP- state president – power-responsibility- Former minister -CT Ravi.