ಕೌನ್ ಬನೇಗಾ ಕರೋಡ್ ಪತಿ: ಅಮಿತಾಬ್ ವಿರುದ್ಧ ಎಫ್’ಐಆರ್

Promotion

ಮುಂಬೈ, ನವೆಂಬರ್ 03, 2020 (www.justkannada.in): ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ಬರುವಂತಹ ಪ್ರಶ್ನೆ ಕೇಳಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ವಿಶೇಷ ಸಂಚಿಕೆಯಲ್ಲಿ ನಟ ಅನುಪ್ ಸೋನಿ ಮತ್ತು ಸಾಮಾಜಿಕ ಕಾರ್ಯಕರ್ತ ಬೆಜ್ವಾಡಾ ವಿಲ್ಸನ್ ಎಂಬುವರಿಗೆ ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಯೊಂದು ಸದ್ಯ ವಿವಾದಕ್ಕೆ ಕಾರಣವಾಗಿದ್ದು, ಬಿಗ್ ಬಿ ಮತ್ತು ಸೋನಿ ಟಿವಿ ಕಾರ್ಯಕ್ರಮ ಮೇಕರ್ಸ್ ವಿರುದ್ಧ ದೂರು ದಾಖಲಾಗಿದೆ.

6 ಲಕ್ಷದ 40 ಸಾವಿರ ರೂ. ನಗದು ಬಹುಮಾನಕ್ಕೆ ಅಮಿತಾಬ್ ಬಚ್ಚನ್ ಅವರು `1927 ರ ಡಿಸೆಂಬರ್ 25 ರಂದು ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮತ್ತವರ ಅನುಯಾಯಿಗಳು ಯಾವ ಗ್ರಂಥದ ಪ್ರತಿಗಳನ್ನು ಸುಟ್ಟು ಹಾಕಿದ್ದರು? ಎಂದು ಪ್ರಶ್ನೆ ಕೇಳಿದ್ದರು.

ಪ್ರಶ್ನೆಗೆ ಎ. ವಿಷ್ಣುಪುರಾಣ ಬಿ.ಭಗವದ್ಗೀತೆ ಸಿ) ಋಗ್ವೇದ ಡಿ) ಮನಸ್ಮೃತಿ ಎಂದು ಆಯ್ಕೆಗಳನ್ನು ನೀಡಲಾಗಿತ್ತು. ಸ್ಪರ್ಧಿಗಳು ಡಿ.) ಮನಸ್ಮೃತಿ ಎಂದು ಉತ್ತರಿಸಿದ್ದರು. ಈ ಪ್ರಶ್ನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಹಾಗೂ ವಿರೋಧಕ್ಕೆ ಕಾರಣವಾಗಿದೆ.