ಡಾಲಿಯ ‘ರತ್ನನ್ ಪ್ರಪಂಚ’ ಶೂಟಿಂಗ್’ಗೆ ಡೇಟ್ ಫಿಕ್ಸ್

ಬೆಂಗಳೂರು, ನವೆಂಬರ್ 03, 2020 (www.justkannada.in): ಡಾಲಿ ಧನಂಜಯ ನಟನೆಯ ರತ್ನನ್ ಪ್ರಪಂಚ ಸಿನಿಮಾ ಶೂಟಿಂಗ್ ನವೆಂಬರ್ 9 ರಿಂದ ಆರಂಭವಾಗಲಿದೆ.

ಶೂಟಿಂಗ್ ಗಾಗಿ ಚಿತ್ರತಂಡ ಸ್ಥಳಗಳನ್ನು ಗುರುತಿಸಿದ್ದು, ಮೊದಲಿಗೆ ಮೈಸೂರು, ನಂತರ ಹಾವೇರಿಯಲ್ಲಿ ಶೂಟಿಂಗ್ ನಡೆಯಲಿದೆ, ಕಾಶ್ಮೀರದಲ್ಲಿ ಶೂಟಿಂಗ್ ನಡೆಸುವ ಸಾಧ್ಯತೆಯಿದೆ.

ಅಂದಹಾಗೆ ಇದು ರೋಹಿತ್ ಪಡಕಿ ನಿರ್ದೇಶನದ ಚಿತ್ರ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಬಂಡವಾಳ ಹಾಕುತ್ತಿದ್ಧಾರೆ. ಇನ್ನು ಧನಂಜಯ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ನಟ, ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಸ್ಯಮಯ ಚಿತ್ರ ರತ್ನನ್ ಪ್ರಪಂಚ ಶೂಟಿಂಗ್ ಸೆಟ್ ಗೆ ಧನಂಜಯ ಶೀಘ್ರವೇ ಸೇರ್ಪಡೆಯಾಗಲಿದ್ದಾರೆ. ರೆಬಾ ಮೋನಿಕಾ ನಾಯಕಿಯಾಗಿದ್ದಾರೆ.

ಇನ್ನೂ ಸಿನಿಮಾದಲ್ಲಿ ಹಿರಿಯ ನಟಿ ಉಮಾಶ್ರಿ, ಐದು ವರ್ಷಗಳ ನಂತರ ಮತ್ತೆ ಸಿನಿಮಾಗಾಗಿ ಬಣ್ಣ ಹಚ್ಚುತ್ತಿದ್ದಾರೆ, ಮಧ್ಯಮ ವರ್ಗದ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.