ಹೊಸ ಅತಿಥಿ ಸ್ವಾಗತಕ್ಕೆ ಕರೀನಾ-ಸೈಫ್ ರೆಡಿ !

Promotion

ಬೆಂಗಳೂರು, ಆಗಸ್ಟ್ 12, 2020 (www.justkannada.in): ನಟಿ ಕರೀನಾ ಕಪೂರ್ ಖಾನ್ ಮತ್ತೆ ಗರ್ಭಿಣಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕರೀನಾ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ನಮ್ಮ ಮನೆಗೆ ಹೊಸ ಅತಿಥಿ ಆಗಮನವಾಗ್ತಿದೆ. ಪ್ರೀತಿ ಹಾಗೂ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಕರೀನಾ ಕಪೂರ್ ಸಂತಸ ಹಂಚಿಕೊಂಡಿದ್ದರು.

ಸೈಫ್ ಅಲಿ ಖಾನ್ ಅವರ ಸಹೋದರಿ ಸೋಹಾ ಅಲಿ ಖಾನ್ , ಸೋನಮ್ ಕಪೂರ್, ರಿಯಾ ಕಪೂರ್, ರಿದ್ಧಿಮಾ ಕಪೂರ್ ಮತ್ತು ಅನೇಕ ಪ್ರಸಿದ್ಧ ಕಲಾವಿದರು ಕರೀನಾ ಕಪೂರ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

2016 ರಲ್ಲಿ ಕರೀನಾ ಕಪೂರ್ ಖಾನ್ ತಮ್ಮ ಮೊದಲ ಮಗ ತೈಮೂರ್ ಅಲಿ ಖಾನ್ ಗೆ ಜನ್ಮ ನೀಡಿದ್ದರು.