ಮೈಸೂರು-ಊಟಿ ರಸ್ತೆಗೆ ನುಗ್ಗಿದ ಕಪಿಲಾ ನದಿ ನೀರು: ಅಪಾಯದಲ್ಲೇ ಸಂಚರಿಸುತ್ತಿರುವ ಪ್ರಯಾಣಿಕರು….

ಮೈಸೂರು,ಆ,8,2020(www.justlkannada.in):  ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಈ ನಡುವೆ ಕಪಿಲಾ ನದಿಗೆ 75 ಸಾವಿರ ಕ್ಯುಸೆಕ್ ಗೂ ಅಧಿಕ ನೀರು ಬಿಟ್ಟ ಪರಿಣಾಮ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿ ವಾಹನಗಳು ಅಪಾಯದಲ್ಲಿ ಸಂಚರಿಸುತ್ತಿವೆ.jk-logo-justkannada-logo

ಕಪಿಲಾ ನದಿಗೆ  ಅಪಾರ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆ ಮೈಸೂರು ಊಟಿ ರಸ್ತೆಗೆ ನದಿ ನೀರು ನುಗ್ಗಿದ್ದು, ಹರಿಯುವ ನೀರಿನಲ್ಲೇ ವಾಹನಗಳು ಸಂಚರಿಸುತ್ತಿವೆ.ನಂಜನಗೂಡು ತಾಲೂಕು ಮಲ್ಲನ ಮೂಲೆ‌ ಮಠದ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ದ್ವಿಚಕ್ರ ವಾಹನಗಳು, ಕಾರುಗಳು ಸೇರಿದಂತೆ ಎಲ್ಲಾ ವಾಹನಗಳು ಅಪಾಯದಲ್ಲಿ ಸಂಚರಿಸುತ್ತಿವೆ

ಅಪಾಯದಲ್ಲಿ ಜನ ಸಂಚಾರ ಇದ್ದರೂ ಸ್ಥಳದಲ್ಲಿ ಯಾವುದೇ ಭದ್ರತೆ  ಮಾಡಲಾಗಿಲ್ಲ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಸಹ ಇಲ್ಲ.ಹೀಗಾಗಿ ಪ್ರಯಾಣಿಕರು ಅಪಾಯದಲ್ಲಿ ಸಂಚಾರ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.kapila-river-water-flowing-mysore-ooty-road

ಅಪಾರ ಪ್ರಮಾಣದ ನೀರು ಹರಿಯಬಿಟ್ಟ ಹಿನ್ನೆಲೆ ಮಲ್ಲನಮೂಲೆ ಮಠದ ಬಳಿಯ ಬಸವೇಶ್ವರ ದೇವಾಲಯ ಜಲಾವೃತವಾಗಿದೆ. ಕಪಿಲಾ ನದಿ ಹುಕ್ಕಿ ಹರಿಯುತ್ತಿರುವುದರಿಂದ ದೇವಾಲಯಕ್ಕೆ  ನೀರು ನುಗ್ಗಿದ್ದು ಹೆಚ್ಚಿನ ಪ್ರಮಾಣದ ನೀರು ಬಿಟ್ಟರೆ ಮತ್ತಷ್ಟು ಮುಳುಗಡೆಯಾಗುವ ಸಾಧ್ಯತೆ ಇದೆ.

Key words: Kapila River –water- flowing – Mysore-Ooty -road.